ವಿನಯ್​-ಸಂಗೀತಾ ನಡುವೆ ಶುರುವಾಯ್ತು ಕಲಹ; ಬಿಗ್​ಬಾಸ್​ ಮನೆಯಲ್ಲಿ ತಾರತಮ್ಯ ನಡೆಯುತ್ತಿರುವುದು ನಿಜಾನಾ

BBKS 10
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಟಾಸ್ಕ್​ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನು ಬಿಗ್​ಬಾಸ್​ ಮನೆಯಲ್ಲಿ ತಾರತಮ್ಯ ನಡೀತಿದ್ಯಾ ಎನ್ನುವ ವಿಚಾರ ಹೆಚ್ಚು ಸದ್ದು ಮಾಡುತ್ತಿದ್ದು, ಈ ವಿಚಾರವಾಗಿ ಮನೆಯ ಸ್ಫರ್ಧಿಗಳ ನಡುವೆ ವಾಕ್ಸಮರ ನಡೆದಿದೆ. ಇಂದು (ಜನವರಿ 03) ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ಬಗ್ಗೆ ಹೇಳಲಾಗಿದ್ದು, ಮುಂದಕ್ಕೆ ಏನಾಗಬಹುದು ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಬಿಗ್​​ಬಾಸ್​ ಮನೆಯ ಸ್ಫರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡುತ್ತಾರೆ. ಈ ವೇಳೆ ಮನೆಯ ಸದಸ್ಯ ವಿನಯ್​ ತಾವು, ಕಾರ್ತಿಕ್, ಮೈಕೆಲ್ ಹಾಗೂ ತುಕಾಲಿ ಸಂತೋಷ್​ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಗೀತಾ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವೇಳೆ ವಿನಯ್​, ತನಿಷಾ ಹಾಗೂ ಸಂಗೀತಾ ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಸಂಗೀತಾ ಕನ್ನಡಿ ಮುಂದೆ ಏಕಾಂಗಿಯಾಗಿ ನಿಂತು ಯೋಚಿಸುತ್ತಿರುವುದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ. ಬಿಡುಗಡೆಯಾಗಿರುವ ಪ್ರೋಮೋ ವೀಕ್ಷಕರ ಕುತೂಹಲ ಮೂಡಿಸಿದ್ದು, ತಾರತಮ್ಯ ಹೊರತುಪಡಿಸಿ ಯಾವ ಕಾರಣಕ್ಕೆ ಸ್ಫರ್ಧಿಗಳ ನಡುವೆ ಜಗಳವಾಗಿರಬಹುದು ಎಂದು ಯೋಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net