More

    ಆರ್​ಸಿಬಿ ನಾಯಕತ್ವದಲ್ಲಿ ಬದಲಾವಣೆ; ಮತ್ತೊಮ್ಮೆ ಕ್ಯಾಪ್ಟನ್​ ಆಗ್ತಾರ ಕಿಂಗ್​ ಕೊಹ್ಲಿ?

    ಬೆಂಗಳೂರು: ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ದುಬೈನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಭರ್ಜರಿ ಮೊತ್ತಕ್ಕೆ ಆಟಗಾರರನ್ನು ಖರೀದಿಸುವ ಮೂಲಕ ಸದ್ದು ಮಾಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (RCB) ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ.

    ಕಳೆದ 16 ಸೀಸನ್​ಗಳಿಂದ ಚಾಂಪಿಯನ್ ಪಟ್ಟ ಅಲಂಕರಿಸುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಕನಸು ಮುಂದುವರೆದಿದೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಆರಂಭಿಸುವ ಆರ್​ಸಿಬಿ ಫೈನಲ್​ ಪ್ರವೇಶಿಸದೇ 7 ವರ್ಷಗಳೇ ಕಳೆದಿವೆ. ಆದರೆ, 2020, 21, 22ರಲ್ಲಿ ಪ್ಲೇ ಆಫ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ ಆರ್​ಸಿಬಿ ಕಳೆದ ಭಾರೀ ವಿರೋಚಿತ ಸೋಲಿನಿಂದಾಗಿ ಕಡೇ ಕ್ಷಣದಲ್ಲಿ ಹೊರಬಿದ್ದಿತ್ತು.

    16ನೇ ಆವೃತ್ತಿಯಲ್ಲಿ ಒಟ್ಟು 14 ಪಂದ್ಯಗಳನ್ನಾಡಿದ್ದ ಆರ್​ಸಿಬಿ 7 ಗೆದ್ದು, 7ರಲ್ಲಿ ಸೋತಿತ್ತು. ಇದರ ಪರಿಣಾಮ 2019ರ ಬಳಿಕ ಲೀಗ್​ ಹಂತದಲ್ಲೇ ತಂಡ ಟೂರ್ನಿಯಿಂದ ಹೊರಬಿದ್ದಿತ್ತು. ಫಾಪ್​ ಡು ಪ್ಲೆಸಿಸ್​ ನಾಯಕತ್ವದ ಬಗ್ಗೆ ಹಲವರು ಚಕಾರ ಎ್ತತ್ತಿದ್ದರು. ಇದರ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡಿರುವ ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರಾಟ್​ ಕೊಹ್ಲಿ ಅವರನ್ನು ಮತ್ತೆ ತಂಡದ ನಾಯಕನನ್ನಾಗಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

    Virat Faf

    ಇದನ್ನೂ ಓದಿ: ಶಾಪಮುಕ್ತ ಅಯೋಧ್ಯೆಯಲ್ಲಿ ಶುರುವಾದ ಅಭಿವೃದ್ಧಿ ಪರ್ವ

    ಏಕೆಂದರೆ ಡುಪ್ಲೆಸಿಸ್ ಕಳೆದ ಎರಡು ಸೀಸನ್​ಗಳಿಂದ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಒಟ್ಟು 27 ಪಂದ್ಯಗಳಲ್ಲಿ ಫಾಫ್ ಸಾರಥ್ಯದಲ್ಲಿ ಕಣಕ್ಕಿಳಿದ ಆರ್​ಸಿಬಿ 14 ಪಂದ್ಯಗಳಲ್ಲಿ ಗೆದ್ದಿದ್ದು, 13 ಪಂದ್ಯಗಳಲ್ಲಿ ಸೋತಿದೆ. ಡುಪ್ಲೆಸಿಸ್ ಅನುಪಸ್ಥಿತಿಯಲ್ಲಿ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡವನ್ನು ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು ಮತ್ತು ಯಶ ಕಂಡಿದ್ದರು. ಇದೇ ಕಾರಣದಿಂದಾಗಿ ಆರ್​ಸಿಬಿ ಫ್ರಾಂಚೈಸಿ ಮತ್ತೆ ಕೊಹ್ಲಿಗೆ ನಾಯಕತ್ವ ನೀಡಲಿದೆಯಾ ಎಂಬ ಚರ್ಚೆ ಶುರುವಾಗಿದೆ.

    ನಾಯಕತ್ವದ ಹೊರೆಯ ಕಾರಣ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರು. ಅಂದರೆ ಭಾರತ ತಂಡವನ್ನು ಹಾಗೂ ಆರ್​ಸಿಬಿಯನ್ನು ಮುನ್ನಡೆಸುತ್ತಿರುವುದು ಹೊರೆಯಾಗುತ್ತಿದೆ. ಹೀಗಾಗಿ ಲೀಗ್ ಕ್ರಿಕೆಟ್​ನ ನಾಯಕತ್ವನ ಜವಾಬ್ದಾರಿಯಿಂದ ಕೆಳಗಿಳಿಯುವುದಾಗಿ ಕೊಹ್ಲಿ ತಿಳಿಸಿದ್ದರು. ಟೀಮ್ ಇಂಡಿಯಾದ ಮೂರು ತಂಡಗಳ ನಾಯಕತ್ವವನ್ನು ತೊರೆದಿದ್ದಾರೆ. ಅಂದರೆ ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಈ ಹಿಂದೆ ರಾಜೀನಾಮೆ ನೀಡಲು ತಿಳಿಸಿದ ಕಾರಣದಿಂದ ಇದೀಗ ಕೊಹ್ಲಿ ಸಂಪೂರ್ಣ ಮುಕ್ತರಾಗಿದ್ದಾರೆ.

    ಇತ್ತ ಸತತ ಎರಡು ಸೀಸನ್​ಗಳಲ್ಲಿ ಫಾಫ್ ಡುಪ್ಲೆಸಿಸ್ ತಂಡವನ್ನು ಮುನ್ನಡೆಸಿದರೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅತ್ತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ 3 ಬಾರಿ ಪ್ಲೇಆಫ್ಸ್ ಪ್ರವೇಶಿಸಿದರೆ, ಒಂದು ಬಾರಿ ಫೈನಲ್ ಪಂದ್ಯವನ್ನಾಡಿದೆ. 39 ವರ್ಷದ ಫಾಫ್ ಡುಪ್ಲೆಸಿಸ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಆರ್​ಸಿಬಿ ಫ್ರಾಂಚೈಸಿಯು ಈ ಬಾರಿಯ ​ಐಪಿಎಲ್​ನಲ್ಲಿ ಮತ್ತೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಿದರೂ ಅಚ್ಚರಿಪಡಬೇಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts