More

    ಬಹುಭಾಷಾ ಕವಿಗೋಷ್ಠಿಗಳು ಹೆಚ್ಚೆಚ್ಚು ನಡೆಯಲಿ

    ಚಿತ್ತಾಪುರ: ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿತೆಗಳನ್ನು ಕೇಳಿದಾಗ ಕಾನೂನು ತಕ್ಕಡಿಯಲ್ಲಿ ಕವಿತೆಗಳ ಮೆರವಣೆಗೆ ಆದಂತೆ ಭಾವತುಂಬಿದವು ಎಂದು ಅಂತಾರಾಷ್ಟ್ರೀಯ ಉರ್ದು ಸಾಹಿತಿ, ಮುಶಾಯರ್ ಜನಕ ಸೈಯದ್ ಜಾಹೀರ್ ಅಹ್ಮದ್ ಫನಾ ಶಿವಮೊಗ್ಗ ಹೇಳಿದರು.

    ದಂಡೋತಿಯ ಭೃಂಗಿಮಠದಲ್ಲಿ ಶ್ರೀ ಗದಿಗಯ್ಯ ಸ್ವಾಮಿಗಳ ೧೬ನೇ ಪುಣ್ಯಾರಾಧನೆ ನಿಮಿತ್ತ ಶುಕ್ರವಾರ ರಾತ್ರಿ ಕಾನೂನು ಕ್ರಿಯಾತ್ಮಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕದ ಜನರು ಸಹೃದಯಿಗಳಾಗಿದ್ದು, ಪರಸ್ಪರ ಸೌಹಾರ್ದತೆಯಿಂದು ಜೀವನ ನಡೆಸುತ್ತಿದ್ದಾರೆ. ಬಹುಭಾಷಾ ಕವಿಗೋಷ್ಠಿ ವಿನೂತನ ಹಾಗೂ ವಿಶಿಷ್ಟವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ತಿಳಿಸಿದರು.

    ಕುರನಳ್ಳಿಯ ಶ್ರೀ ಕಾವೇರಿ ಮಾತೆ ಮಾತನಾಡಿ, ಮಠಗಳಿಂದ ಧರ್ಮ ಕಾರ್ಯದ ಜತೆಗೆ ಭಾಷೆ ಹಾಗೂ ಸಂಸ್ಕಾರ ಉಳಿಸುವ ಕೆಲಸಗಳಾಗುತ್ತಿವೆ. ಸಮಾಜಕ್ಕೆ ಹಿತಬಯಸುವ ಸಂದೇಶಗಳನ್ನು ಬಹುಭಾಷಾ ಕವಿತೆಗಳ ಮೂಲಕ ಸಾರುವ ಕಾರ್ಯ ಇಂದಿನ ಅಗತ್ಯವಾಗಿದೆ ಎಂದರು.

    ಕAಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಮಕ್ಕಳು ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಪಡೆದು ಹೆತ್ತವರು, ಜನಿಸಿದ ಊರು, ಜಿಲ್ಲೆ, ರಾಜ್ಯ ಹಾಗೂ ರಾಷ್ಟçಕ್ಕೆ ಕೀರ್ತಿ ತರಬೇಕು. ದಂಡೋತಿ ಗ್ರಾಮದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಭಾವೈಕ್ಯತೆಯ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿರುವುದು ಸಂತಸದ ಸಂಗತಿ ಎಂದು ನುಡಿದರು.

    ಬಾಲಯೋಗಿನಿ ಶ್ರೀ ಜಯಶ್ರೀ ಮಾತಾ, ಪ್ರಮುಖರಾದ ವೀರಯ್ಯ ಸ್ವಾಮಿ ಗುರುವಿನ, ಗುರುಲಿಂಗಪ್ಪ ಯರಗಲ್, ಚನ್ನಪ್ಪ ಯರಗಲ್, ಡಾ.ಜಯಶ್ರೀ ಜಾಧವ್, ಜೀವಣಪ್ಪ ರೋಜದ್, ಮಲ್ಲಿಕಾರ್ಜುನ ಶಹಬಾದಕರ್, ನಾರಾಯಣ ಹಡಪದ, ಸಿದ್ದು ಕೊಂಚೂರ, ಮುನ್ನೆಪ್ಪ ದಾಯಿ, ಶಿವಲಿಂಗಪ್ಪ ತೆಲಗಾಣಿ, ಶಿಕರೆಪ್ಪ ತಿಮನಾಯಕ, ರವಿ ಕಾಳಗಿ, ರಾಚಯ್ಯ ಸ್ವಾಮಿ ಮಠಪತಿ ಇತರರಿದ್ದರು.

    ರಾಚಯ್ಯ ಸ್ವಾಮಿ ಮಠಪತಿ, ಎಸ್.ಬಿ.ಪಾಟೀಲ್ ಬಟಗೇರಾ ಅವರು ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ಡಾ. ಚಂದು ಜಾಧವ್, ರೇವಣಸಿದ್ದಯ್ಯ ಭೃಂಗಿಮಠ (ಕನ್ನಡ), ಸೈಯದ್ ಜಾಹೀರ್ ಅಹ್ಮದ್ ಫನಾ (ಉರ್ದು), ಮ.ಗ. ಭೃಂಗಿಮಠ (ಹಿಂದಿ), ಚೈತ್ರಾ ಬಟಗೇರ (ಇಂಗ್ಲಿಷ್), ಬಸಲಿಂಗಮ್ಮ ಮಠ (ತೆಲುಗು) ಮುಂತಾದವರು ಕವಿತೆ ವಾಚಿಸಿದರು. ಭೃಂಗಿಮಠ ಫೌಂಡೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ಭೃಂಗಿಮಠ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಉರ್ದು ಕವಿ ಸೈಯದ್ ಜಾಹೀರ್ ಅಹ್ಮದ್ ಹಾಗೂ ಸಾಹಿತಿ ಬಿ.ಎಚ್ ನಿರಗುಡಿ ಅವರನ್ನು ಸನ್ಮಾನಿಸಲಾಯಿತು. ರಾಜು ಹಿರೇಮಠ ನಿರೂಪಣೆ ಮಾಡಿದರು. ಪವಿತ್ರಾ ವಂದಿಸಿದರು.

    ದಂಡೋತಿ ರಾಷ್ಟçಕೂಟರ ಸೈನ್ಯ ನೆಲೆಸುವ ತಾಣವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಊರಲ್ಲಿ ಜೈನ ಬಸದಿಗಳಿವೆ, ಅಲ್ಲಿಂದ ಮಳಖೇಡಕ್ಕೆ ಕುದುರೆ ಓಡಲು ಕಲ್ಲಿಂದ ನಿರ್ಮಿಸಿದ್ದ ರಸ್ಥೆಗಳಿವೆ. ಇತಿಹಾಸಕಾರರು ಹಾಗೂ ಸಂಶೋಧಕರು ಗ್ರಾಮಕ್ಕೆ ಭೇಟಿ ನೀಡಿ ಇತಿಹಾಸದ ಮೇಲೆ ಬೆಳಕು ಚಲ್ಲುವ ಕೆಲಸ ಮಾಡಬೇಕು.
    | ಶ್ರೀ ಕಾವೇರಿ ಮಾತೆ, ಕುರನಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts