More

    ಶ್ರೀ ಮಹೇಶ್ವರ ಸ್ವಾಮೀಜಿ ಜಾತ್ರೆ ಸಂಪನ್ನ

    ಉಜ್ಜಿನಿ: ಮಂಗಾಪುರದಲ್ಲಿ ಶ್ರೀ ಮಹೇಶ್ವರ ಸ್ವಾಮಿ ರಥೋತ್ಸವ ಹಾಗೂ ಉಜ್ಜಯಿನಿ ಸದ್ಥರ್ಮ ಪೀಠದ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು.

    ಪ್ರತಿ ವರ್ಷ ನಡೆಯುವ ಮಹೇಶ್ವರ ಸ್ವಾಮಿಯ ರಥೋತ್ಸವವನ್ನು ಇಲ್ಲಿನ ಭಕ್ತ ಸಮೂಹ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ರಥೋತ್ಸವಕ್ಕೆ ಮುನ್ನ ಗ್ರಾಮದ ಹೊರ ವಲಯದಲ್ಲಿರುವ ಮಹೇಶ್ವರ ಸ್ವಾಮಿಯ ಗದ್ದುಗೆಗೆ ನೈವೇದ್ಯ ಮಾಡಿದ ಪ್ರಸಾದವನ್ನು ಐದು ಜನ ಸ್ವಾಮಿಗಳು ಸೇರಿ ವಿಧಿ ವಿಧಾನಗಳ ಮೂಲಕ ಹೊಸ ಮಣ್ಣಿನ ಮಡಿಕೆಯಲ್ಲಿಟ್ಟು ಪೂಜೆ ನೆರವೇರಿಸಿ ನೆಲದಲ್ಲಿ ಮುಚ್ಚುತ್ತಾರೆ.

    ಇದನ್ನೂ ಓದಿ:ದಂಡಿನ ದುರುಗಮ್ಮ ಜಾತ್ರೆಗೆ ಚಾಲನೆ

    ಈ ಪ್ರಸಾದ ಒಂದು ವರ್ಷದವರೆಗೂ ಕೆಡದೆ ಇರುತ್ತದೆ. ಇದು ಭಕ್ತರ ನಂಬಿಕೆಯಾಗಿದ್ದು, ಅದು ಚಾಚು ತಪ್ಪದೆ ನಡೆದುಕೊಂಡು ಬರುತ್ತಿದೆ. ಈ ವರ್ಷ ಇಟ್ಟ ಪ್ರಸಾದ ಮಡಿಕೆಯನ್ನು ಮುಂದಿನ ರಥೋತ್ಸವ ದಿನದಂದು ತೆಗೆಯುತ್ತಾರೆ. ಅಗ ಪ್ರಸಾದ ಕಡೆದೆ ಇದ್ದರೆ ಗ್ರಾಮಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಭಾವಿಸುತ್ತಾರೆ.

    ಅಡ್ಡಪಲ್ಲಕ್ಕಿ ಮಹೋತ್ಸವ

    ಜಾತ್ರೆಯ ಅಂಗವಾಗಿ ನಡೆಯುವ ಪ್ರಸಾದ ಅನ್ನ, ಬೆಲ್ಲ ಮತ್ತು ಬಾಳೆ ಹಣ್ಣು ಮಾತ್ರ ಇರುತ್ತದೆ. ಇವೆಲ್ಲವನ್ನು ಕಲಿಸಿಕೊಂಡು ಊಟ ಮಾಡಬೇಕು. ನಂತರ ಮಧ್ಯಾಹ್ನ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.

    ನಂತರ ಸಂಜೆ ನೂತನವಾಗಿ ನಿರ್ಮಾಣ ಮಾಡಿರುವ ರಥಕ್ಕೆ ಉಜ್ಜಯಿನಿ ಜಗದ್ಗುರುಗಳು ಚಾಲನೆ ನೀಡಿದರು. ಬಾಳೆ ಕಂಬ, ತೆಂಗಿನ ಕಾಯಿ ಗೊಂಚಲು, ಹೂವಿನ ಅಲಂಕಾರ ಮಾಡಿದ್ದ ನೂತನ ರಥವನ್ನು ಸಕಲ ವಾದ್ಯಗಳೊಂದಿಗೆ ಭಕ್ತರು ಪಾದಗಟ್ಟೆಯವರೆಗೂ ಎಳೆದುಕೊಂಡು ಮರಳಿ ನೆಲೆ ನಿಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts