More

    ಡಾ.ಶಂಭುಲಿಂಗ ಶ್ರೀಗಳಿಗೆ ಎಂಪಿ ಟಿಕೆಟ್ ನೀಡಿ

    ಆಳಂದ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆ ಕರ್ನಾಟಕದ ಯೋಗಿ ಪಡಸಾವಳಿ-ಡೋಣಗಾಂವ್ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರಿಗೆ ಬೀದರ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಪಡಸಾವಳಿ ಗ್ರಾಮಸ್ಥರು ಆಗ್ರಹಿಸಿದರು.

    ಪಡಸಾವಳಿ ಗ್ರಾಮದ ಧರ್ಮರಾಯ ದೇವಸ್ಥಾನದಲ್ಲಿ ಗುರುವಾರ ಸಭೆ ನಡೆಸಿ, ಬೀದರ್ ಕ್ಷೇತ್ರಕ್ಕೆ ಒಳಪಡುವ ಆಳಂದ ಶೈಕ್ಷಣಿಕ, ಕೈಗಾರಿಕೆ ಸೇರಿ ಹಲವು ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದೆ. ರಸ್ತೆ ಸಂಪರ್ಕ, ಕುಡಿವ ನೀರು ಸೇರಿ ಇನ್ನಿತರ ಮೂಲ ಸೌಕರ್ಯಗಳಲ್ಲಿದೆ ಜನರು ಪರದಾಡುತ್ತಿದ್ದಾರೆ. ಇಲ್ಲಿನ ಜನರು ಕಳೆದ ಎರಡು ಬಾರಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಜನಪ್ರತಿನಿಧಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

    ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಿಷ್ಠಾವಂತ ವ್ಯಕ್ತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಡಸಾವಳಿಯ ಡಾ.ಶಂಭುಲಿಂಗ ಶ್ರೀಗಳು ಜನರ ಸಮಸ್ಯೆಯನ್ನು ಅರಿತಿದ್ದಾರೆ. ಅಲ್ಲದೆ ಹಿಂದು ಧರ್ಮದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಗಡಿ ಭಾಗದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಶ್ರೀಗಳಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಮುಂದಿನ ದಿನಗಳಲ್ಲಿ ಸಾವಿರಾರೂ ಭಕ್ತ ಸಮೂಹದೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

    ಸ್ವಾವಳೇಶ್ವರದ ಶ್ರೀ ರೇವಣಸಿದ್ಧ ಸ್ವಾಮೀಜಿ, ಪ್ರಮುಖರಾದ ಬಸವಂತರಾವ ಶೇರಿಕರ, ಶಿವಾನಂದ ತೀರ್ಥೇ, ಯಶವಂತ ಪೂಜಾರಿ, ಮಹೇಶ ಮುನ್ನಹಳ್ಳಿ, ಸೋಮನಾಥ ಪಾಟೀಲ್, ಗಣಪತಿ ಕುಂಬಾರ, ಶಿವಾನಂದ ತೀರ್ಥೆ, ಪ್ರಕಾಶ ಮುನ್ನಹಳ್ಳಿ, ಶಾಂತಮಲ್ಲಪ್ಪ ಅಚಲೇರಿ, ಶಿವಶರಣಪ್ಪ ಪಾಟೀಲ್, ಸಂತೋಷ ಮರಬೇ, ವಿರೂಪಾಕ್ಷಪ್ಪ ಪಾಟೀಲ್, ಮಲ್ಲಿನಾಥ ಮೂಲಗೆ, ಸತ್ತೆಶ್ವರ ಖಜೂರಿ, ರೇವಣಸಿದ್ದಯ್ಯ ಸ್ವಾಮಿ, ಕುಪೇಂದ್ರ ಪಾಟೀಲ್, ಮಹಾದೇವ ಪೂಜಾರಿ, ಶರಣಬಸಪ್ಪ ಬಿರಾದಾರ, ಶರಣಬಸಪ್ಪ ಬಿರಾದಾರ, ರಾಜಕುಮಾರ ದೇಶಮುಖ, ಗುಂಡಪ್ಪ ಅಣ್ಣೂರೆ ಸೇರಿ ಪಡಸಾವಳಿ, ಸಾವಳೇಶ್ವರ, ಸಕ್ಕರಗಾ, ಮಟಕಿ, ಚಿಂಚೋಳಿ(ಕೆ), ನಿರಗುಡಿ, ಚಿಂಚೋಳಿ (ಬಿ) ಗ್ರಾಮದ ಸುಮಾರು ೫೦೦ಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts