More

  ತೋಟಗಾರಿಕೆ ಬೆಳೆಗೆ ಒತ್ತು ನೀಡಿ

  ಕುಕನೂರು: ನರೇಗಾ ಯೋಜನೆ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಪವನ್ ಕುಮಾರ ಮಾಲಪಾಟಿ ಹೇಳಿದರು.

  ತಾಲೂಕಿನ ರಾಜೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸಹಾಯ ಧನ ಪಡೆದು ನುಗ್ಗೆ ಬೆಳೆದ ರೈತರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದರು.

  ಇದನ್ನು ಓದಿ:ತೋಟಗಾರಿಕೆ ಬೆಳೆಯತ್ತ ಗಮನ ಹರಿಸಿ

  ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಯಲು ವೈಯಕ್ತಿಕವಾಗಿ 5 ಲಕ್ಷ ರೂ. ವರೆಗೆ ಅನುದಾನ ಪಡೆಯಬಹುದು. ಇನ್ನೂ ಹೆಚ್ಚಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನಂತರ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ನುಗ್ಗೆ ತೋಟ ನಾಟಿ ಕಾಮಗಾರಿ ಪರಿಶೀಲನೆ ಮಾಡಿದರು. ನುಗ್ಗೆ ಬೆಳೆದ ರೈತರೊಂದಿಗೆ ಸಂವಾದ ನಡೆಸಿದರು.

  ರೈತ ಮುತ್ತಣ್ಣ ಮಂಡಲಗೇರಿ ಮಾತನಾಡಿ, ಇದುವರೆಗೂ ನುಗ್ಗೆ ಬೆಳೆಯಿಂದ 50 ಸಾವಿರ ರೂ. ಆದಾಯ ಬಂದಿದೆ. ಇನ್ನೂ ಕಟಾವು ಮಾಡುವುದು ಬಾಕಿ ಇದೆ. ನರೇಗಾ ಯೋಜನೆಯಿಂದ 35,392 ರೂ.ಸಹಾಯಧನ ಪಡೆಯಲಾಗಿದೆ. ಪಿಎಂಕೆಎಸ್‌ವೈ ಹನಿ ನೀರಾವರಿಗಾಗಿ 84,177 ರೂ.ಗಳ ಸಹಾಯಧನ ಪಡೆಯಲಾಗಿದೆ ಎಂದರು.

  ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ತಾಪಂ ಸಹಾಯ ನಿರ್ದೇಶಕ ಶರಣಪ್ಪ ಕೆಳಗಿನಮನಿ ಇತರರಿದ್ದರು.  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts