More

    ತೋಟಗಾರಿಕೆ ಬೆಳೆಯತ್ತ ಗಮನ ಹರಿಸಿ


    ಯಾದಗಿರಿ: ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕಾ ಇಲಾಖೆಯಿಂದ ನಗರದ ಲುಂಬಿನಿ ವನದಲ್ಲಿ ಶನಿವಾರ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು.

    ಪ್ರದರ್ಶನದಲ್ಲಿ ಅತ್ಯಾಕರ್ಷಕ ಹೂ ವಿವಿಧ ಮಾದರಿಯ ಪ್ರತಿಕೃತಿಗಳನ್ನು ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿ, ಹಲವು ಬಗೆಯ ತರಕಾರಿ-ಹಣ್ಣುಗಳಿಂದ ತಯಾರಿಸಿದ ಉತ್ತಮ ಚಿತ್ರಗಳು ಎಲ್ಲರ ಕಣ್ಮನಸೆಳೆಯುತ್ತಿವೆ. ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಪ್ರದರ್ಶನವು ಆಕರ್ಷಣೀಯ ಸ್ಥಳವಾಗಿದೆ. ಅಲ್ಲದೆ ರೈತರಿಗೆ ಪ್ರೇರಣೆಯಾಗಿದೆ. ರೈತರು ಕೃಷಿಯ ಜತೆಗೆ ತೋಟಗಾರಿಕೆ ಬೆಳೆಗಳತ್ತ ಒಲವು ಮೂಡಿಸಿಕೊಳ್ಳುವ ಅಗತ್ಯವಿದೆ. ಇದರಿಂದ ಆಥರ್ಿಕವಾಗಿ ಸದೃಢರಾಗಬಹುದು ಎಂದು ಸಲಹೆ ನೀಡಿದರು.

    ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೈತಾಪಿ ವರ್ಗ ತೋಟಗಾರಿಕೆ ಬೆಳೆ ಬೆಳೆಯುವುದರಲ್ಲಿ ಮುಂದಿದೆ. ಪಕ್ಕದ ವಿಜಯಪುರದಲ್ಲೂ ಸಹ ಹಣ್ಣುಗಳನ್ನು ಹೆಚ್ಚು ಬೆಳೆಯುತ್ತಾರೆ. ನಮ್ಮಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

    ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿಪುಲ ಅವಕಾಶಗಳಿವೆ. ಕೃಷ್ಣಾ, ಭೀಮಾ ನದಿಗಳು ಹರಿಯುವುದರಿಂದ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಇಲಾಖೆ ಅಧಿಕಾರಿಗಳು ರೈತಾಪಿ ವರ್ಗಕ್ಕೆ ತೋಟಗಾರಿಕೆ ಬೆಳೆಗಳಾದ ವಿವಿಧ ರೀತಿಯ ಹಣ್ಣು, ತರಕಾರಿ ಬೆಳೆಯಲು ಪ್ರೇರಣೆ ನೀಡಬೇಕು. ಅಲ್ಲದೆ ಸಕರ್ಾರದಿಂದ ಸಿಗುವ ಸಬ್ಸಿಡಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts