More

    ಅಡಕೆ ಬೆಳೆಗೆ ಮರಳು ಮಿಶ್ರಿತ ಕೆಂಪುಮಣ್ಣು ಸೂಕ್ತ

    ಚಿಕ್ಕಮಗಳೂರು: ಅಡಕೆ ಬೆಳೆ ಬೆಳೆಯಲು ಮರಣು ಮಿಶ್ರಿತ ಕೆಂಪುಮಣ್ಣು ಸೂಕ್ತವಾಗಿದ್ದು, ಈ ರೀತಿಯ ಮಣ್ಣಿರುವ ಪ್ರದೇಶದಲ್ಲಿ ಅಡಕೆ ಬೆಳೆದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ನಾರಾಯಣ್ ಎಸ್.ಮಾವರ್ಕರ್ ತಿಳಿಸಿದರು.

    ಚಿಕ್ಕಮಗಳೂರು ಜಿಲ್ಲೆಯ ಕೇತುಮಾರನಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮೂಡಿಗೆರೆ ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿದ್ದ ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಗೆ ಬರುವ ರೋಗಗಳ ನಿರ್ವಹಣೆ ಬಗ್ಗೆಯೂ ರೈತರು ತಿಳಿವಳಿಕೆ ಹೊಂದಿರಬೇಕು ಎಂದು ಹೇಳಿದರು.
    ಅಡಕೆ ಬೆಳೆಗೆ ಹಿಡಿಮುಂಡಿಗೆ ರೋಗ ಹೆಚ್ಚು ಹಾನಿ ಮಾಡುತ್ತಿದ್ದು, ಈ ರೋಗ ನಿರ್ವಹಣೆ ಮಾಡಲು ಸರಿಯಾದ ಪ್ರಮಾಣದ ಗೊಬ್ಬರ ನೀಡುವ ಜೊತೆಗೆ ಒಂದು ಲೀಟರ್ ನೀರಿಗೆ ಒಂದು ಗ್ರಾಂ ಟೆಟ್ರಾ ಸೈಕ್ಲಿನ್ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಇನ್ನು ಅಡಕೆಗೆ ಬರುವ ಅಣಬೆ ರೋಗ ನಿಯಂತ್ರಿಸಲು ಹೆಕ್ಸಾಕೋನಾಜೋಲ್, ಪ್ರೋಫಿಕೋನಜೋಲ್ ಪ್ರತಿಲೀಟರ್ ನೀರಿಗೆ ೨ಮಿಲಿಲೀಟರ್ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದು ಮಾಹಿತಿ ನೀಡಿದರು.
    ಪ್ರಗತಿಪರ ರೈತ ಮಹಿಳೆ ಶೃತಿ, ಬೀಜಶಾಸ್ತ್ರ ವಿಜ್ಞಾನಿ ಡಾ. ಹರ್ಷಿತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts