ಸಿಲಿಕಾನ್ ಸಿಟಿಯಿಂದ ದೂರವಿದ್ದು ಕೃಷಿಯಲ್ಲೇ ಖುಷಿ ಕಾಣುತ್ತಿರುವ ಕರಾವಳಿ ಕುವರಿ!

Bhoomi
Published on

ಉಡುಪಿ: ಕಿರುತೆರೆಯಲ್ಲಿ ಕಿನ್ನರಿಯಾಗಿ ಖ್ಯಾತಿಗಳಿಸಿ, ಬಿಗ್​ಬಾಸ್‌ ಸೀಸನ್‌ 7ರಲ್ಲಿ ಫೈನಲ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಕರಾವಳಿ ಕುವರಿ ಭೂಮಿ ಶೆಟ್ಟಿ ಸದ್ಯ ಸಿಲಿಕಾನ್ ಸಿಟಿಯಿಂದ ದೂರವಿದ್ದು, ಹುಟ್ಟೂರಿನಲ್ಲಿ ಕೃಷಿಯಲ್ಲೇ ಖುಷಿ ಕಾಣುತ್ತಿದ್ದಾರೆ.

ಮೂಲತಃ ಉಡುಪಿ ಜಿಲ್ಲೆ ಬೈದೂಂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯ ಭೂಮಿ ಶೆಟ್ಟಿ, ವಿದ್ಯಾಭ್ಯಾಸ ನಟನೆ ಅಂತ ಬೆಂಗಳೂರಿನಲ್ಲೇ ಇರುತ್ತಿದ್ದರು. ಆದ್ರೆ, ಸದ್ಯ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಊರಲ್ಲೇ ಇದ್ದು, ಸುಮ್ನೆ ಕಾಲ ಕಳೆಯುವ ಬದಲು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಭೂಮಿ ಶೆಟ್ಟಿ ಅವರ ಅಜ್ಜ ಭತ್ತದ ಬೇಸಾಯ ಮಾಡುತ್ತಿದ್ದ ಭೂಮಿ ಈ ಬಾರಿ ಬೇಸಾಯ ಮಾಡುವುದು ಬೇಡ ಎನ್ನುವ ನಿರ್ಧಾರ ಮನೆಯವರದ್ದಾಗಿತ್ತು. ಆದ್ರೆ ನಾವೆಲ್ಲರೂ ‌ಮನೆಯಲ್ಲೇ ಇದ್ದು ಯಾಕೆ ವ್ಯವಸಾಯ ಮಾಡಬಾರದು ಅಂತ ಯೋಚನೆ ಬಂದು, ಭೂಮಿ ಶೆಟ್ಟಿ ಅವರೇ ಮುಂದಾಳತ್ವ ವಹಿಸಿ, ಮನೆಯವರ ಸಹಕಾರದಿಂದ ಕೃಷಿ ಚಟುವಟಿಕೆ ಮಾಡಿ ಖುಷಿ ಪಡುತ್ತಿದ್ದಾರೆ.

ಭೂಮಿ ಶೆಟ್ಟಿ ತಾವೇ ಸ್ವತಃ ಗೊಬ್ಬರ ಹೊತ್ತು, ನಾಟಿ ಮಾಡಿ ಬೆಳಗ್ಗಿನಿಂದ ಸಂಜೆವರೆಗೂ ಕೃಷಿಕಳಂತೆ ಹೊಲದಲ್ಲಿ ದುಡಿದು ಬೆವರು ಸುರಿಸಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡ ಅಪರೂಪದ ಪೋಟೋ‌ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net