ನಿಮ್ಮಮ್ಮನಿಗೆ ಹೀಗೆ ಮೆಸೇಜ್​​ ಮಾಡಿದ್ರೆ ಪರವಾಗಿಲ್ವಾ?; ಅಶ್ಲೀಲವಾಗಿ ಕಾಮೆಂಟ್​​ ಮಾಡುವವರಿಗೆ ಬಿಗ್​ಬಾಸ್​ ಸುಂದ್ರಿಯಿಂದ ಬಂತು ವಾರ್ನಿಂಗ್

actress shweta
Published on

ನವದೆಹಲಿ: ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಈ ಮೂಲಕ ಜನಮನ್ನಣೆ ಗಳಿಸಿದವರು ಅನೇಕರಿದ್ದಾರೆ. ಅವರಲ್ಲಿ ಶ್ವೇತಾ ವರ್ಮಾ ಕೂಡ ಒಬ್ಬರು. ಅವರು ಅನೇಕ ತೆಲುಗು ಚಲನಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಇತ್ತೀಚಿಗೆ ಶ್ವೇತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಅಸಭ್ಯವಾಗಿ ಕಾಮೆಂಟ್ ಮಾಡಿದ ವ್ಯಕ್ತಿಯ ಪ್ರೊಫೈಲ್ ಐಡಿಯನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಖಡಕ್​ ಉತ್ತರ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ತಮ್ಮ ವೈಯಕ್ತಿಕ ವಿಚಾರಗಳನ್ನೂ ಅಭಿಮಾನಿಗಳೊಂದಿಗೆ ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ ವ್ಯಕ್ತಿಯೊಬ್ಬ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ. ಆಕೆಯ ಖಾಸಗಿ ಭಾಗಗಳ ಬಗ್ಗೆ ಕೆಟ್ಟ ಕಾಮೆಂಟ್ಗಳನ್ನು ಮಾಡಿದ್ದಾರೆ. ವ್ಯಕ್ತಿ ಕಳುಹಿಸಿದ ಸಂದೇಶಗಳ ಜೊತೆಗೆ, ಅವಳು ಅವನ ಪ್ರೊಫೈಲ್‌ನ ಸ್ಟೀನ್‌ಶಾಟ್‌ಗಳನ್ನು ತೆಗೆದುಕೊಂಡು ಅದನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾಳೆ.

ಶ್ವೇತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು, ಅಶ್ಲೀಲ ಕಾಮೆಂಟ್ ಮಾಡಿದ್ದಾನೆ. ಇಂತಹ ಮಾತುಗಳನ್ನಾಡಲು ಇವನಿಗೆ ಏನು ಅನಿಸುವುದಿಲ್ವಾ?.. ಯಾರಾದರೂ ತನ್ನ ತಾಯಿಗೆ ಅದೇ ರೀತಿ ಹೇಳಿದರೆ ಅದು ಸರಿ ಎನಿಸುತ್ತದೆಯೇ? ಇಂತಹವರನ್ನು ಕಂಡರೆ ನಾಚಿಕೆಯಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಅವನ ನಿಜವಾದ ಖಾತೆ? ನಕಲಿ ಖಾತೆಯೇ? ಎನ್ನುವ ಮಾಹಿತಿ ಪಡೆದುಕೊಂಡಿದ್ದೇನೆ. ಇನ್ನು ಮುಂದೆ ಇಂತಹ ಕೆಲಸ ಮಾಡದೇ ಪಾಠ ಕಲಿತರೆ ಒಳ್ಳೆಯದು ಎಂದು ಬರೆದುಕೊಂಡು ನೆಗಿಟಿವ್ ಆಗಿ ಕಾಮೆಂಟ್​​ ಮಾಡುವ ನೆಟ್ಟಿಗರಿಗೆ ಬಿಸಿ ಮುಟ್ಟಿಸಿದ್ದಾರೆ. ಶ್ವೇತಾ ಅವರ ಈ ವಿಡಿಯೋಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net