More

    93.5% ಮಾರ್ಕ್ಸ್ ಬಂದಿದ್ದು​​ ನೋಡಿ ಮೂರ್ಛೆ ಹೋದ 10ನೇ ತರಗತಿ ವಿದ್ಯಾರ್ಥಿ; ICUನಲ್ಲಿ ಚಿಕಿತ್ಸೆ

    ಉತ್ತರಪ್ರದೇಶ: ವಿದ್ಯಾರ್ಥಿಯೊಬ್ಬ ತನಗೆ ಭಾರೀ ಉತ್ತಮ ಫಲಿತಾಂಶ ಬಂದಿದ್ದು ನೋಡಿ ಮೂರ್ಛೆ ಹೋಗಿದ್ದಾನೆ. ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಂಗಳವಾರ ಉತ್ತರ ಪ್ರದೇಶದ 10ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಇಲ್ಲಿಯ ಮಹಾಋಷಿ ದಯಾನಂದ ಇಂಟರ್‌ ಕಾಲೇಜಿನ ವಿದ್ಯಾರ್ಥಿ ಅಂಶುಲ್‌ ಕುಮಾರ್‌ಗೆ ಶೇ.93.5ರಷ್ಟು ಫಲಿತಾಂಶ ಬಂದಿದೆ. ಫಲಿತಾಂಶ ನೋಡಿದ ಕೂಡಲೇ ಆತನಿಗೇ ಭಾರೀ ಅಚ್ಚರಿ ಉಂಟಾಗಿ ಖುಷಿಯಲ್ಲಿ ಮೂರ್ಛೆ ಹೋಗಿದ್ದಾನೆ.

    ಮೂರ್ಚೆ ಹೋದ ಬಾಲಕನ ಸ್ಥಿತಿ ನೋಡಿದ ಕುಟುಂಬಸ್ಥರು ಆತನನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

    ಪೋಸ್ಟ್ ಆಫೀಸ್‌ನಲ್ಲಿ ಗುತ್ತಿಗೆ ಕೆಲಸ ಮಾಡುವ ಅನ್ಶುಲ್‌ನ ತಂದೆ ಸುನೀಲ್‌ಕುಮಾರ್ ಈ ದುಃಖದ ಘಟನೆಯನ್ನು ವಿವರಿಸಿದರು. ಮನೆಯಲ್ಲಿ ಅನ್ಶುಲ್  ಎಚ್ಚರಗೊಳಿಸಲು ಎಷ್ಟೆ ಪ್ರಯತ್ನಿಸಿದರೂ ಸ್ಥಿತಿ ಸುಧಾರಿಸಲಿಲ್ಲ, ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಶೈಕ್ಷಣಿಕ ಯಶಸ್ಸಿನ ಸಂತೋಷದ ನಡುವೆ ಹಠಾತ್ ಕುಸಿತವು ಕುಟುಂಬ ಮತ್ತು ಸ್ನೇಹಿತರನ್ನು ಆಳವಾಗಿ ಕಳವಳಗೊಳಿಸಿದೆ.

    ಒಂದೇ ದಿನ 10 ಹುಡುಗರಿಗೆ ಕಿಸ್‌ ಮಾಡಿದ್ದೇನೆ; ಸ್ಟಾರ್​ ನಟಿಯ ಸೀಕ್ರೆಟ್​​ ರಿವೀಲ್

    700 ಕಾರು, 8 ಖಾಸಗಿ ಜೆಟ್‌, ಕೋಟಿ…ಕೋಟಿ ಬೆಲೆ ಬಾಳುವ ಆಸ್ತಿ; ಇದು ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts