More

    ಅಂಕ ಗಳಿಕೆ ಶಿಕ್ಷಣದಿಂದ ಪ್ರಗತಿ ಅಸಾಧ್ಯ

    ರಾಯಚೂರು: ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಶಿಸ್ತು, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್ನೆಸ್ಸೆಸ್ ಸಹಕಾರಿಯಾಗಿದೆ ಎಂದು ರಾಯಚೂರು ವಿವಿ ಕುಲಸಚಿವ ಪ್ರೊ.ವಿಶ್ವನಾಥ ಹೇಳಿದರು.

    ರಾಯಚೂರು ಕೃಷಿ ವಿಜ್ಞಾನಗಳ ವಿವಿ ಸಭಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಪಠ್ಯ ಹಾಗೂ ಅಂಕಗಳಿಗೆ ಸೀಮಿತವಾದ ಶಿಕ್ಷಣದಿಂದ ಪ್ರಗತಿ ಸಾಧ್ಯವಿಲ್ಲ ಎಂದರು.

    ವಿದ್ಯಾರ್ಥಿಗಳಲ್ಲಿ ಪ್ರಪಂಚದ ಅರಿವು ಆಗುವುದು ಮುಖ್ಯವಾಗಿದ್ದು, ಈ ಕೆಲಸವನ್ನು ಎನ್ನೆಸ್ಸೆಸ್ ಮಾಡುತ್ತಿದೆ. ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ಸಂಗತಿಯೂ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಸೇವೆ ಹಾಗೂ ನಾಯಕತ್ವ ಗುಣವನ್ನು ಕಲಿಸಿಕೊಡುವುದು ಯೋಜನೆಯ ಮುಖ್ಯ ಉದ್ದೇಶ. ಪ್ರೀತಿ, ಸ್ನೇಹ, ವಿಶ್ವಾಸ, ಸಹಾಯ ಹಾಗೂ ಸೌಹಾರ್ದ ಗುಣ ಬೆಳೆಯುವ ಜತೆಗೆ ವಿದ್ಯಾರ್ಥಿಗಳ ನಡುವೆ ಭಾಷೆ, ಸಂಸ್ಕೃತಿ ಹಾಗೂ ಜ್ಞಾನದ ವಿನಿಮಯ ಆಗುತ್ತದೆ ಎಂದು ಪ್ರೊ.ವಿಶ್ವನಾಥ ತಿಳಿಸಿದರು.

    ಕೃಷಿ ವಿಜ್ಞಾನ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಭಾರತದಲ್ಲಿ ಶೇ.65 ಜನ 25ರಿಂದ 35 ವಯೋಮಾನದವರಾಗಿದ್ದು, ಅವರಿಗೆ ಮಾರ್ಗದರ್ಶನ ಮಾಡಿ ಮುನ್ನಡೆಸುವುದರಲ್ಲಿ ದೇಶದ ಪ್ರಗತಿಯ ಹಿತ ಅಡಗಿದೆ. ಈ ಕೆಲಸವನ್ನು ಎನ್ನೆಸ್ಸೆಸ್ ಅಚ್ಚುಕಟ್ಟಾಗಿ ಮಾಡುತ್ತಿದೆ. ಸ್ವಚ್ಛತೆ, ಸ್ವಯಂ ಸೇವೆ, ಸಾಮಾಜಿಕ ಕಳಕಳಿ, ಗ್ರಾಮೀಣ ಅಭಿವೃದ್ಧಿ, ರಾಷ್ಟ್ರಸೇವೆ ಎನ್ನೆಸ್ಸೆಸ್ ಮುಖ್ಯ ಉದ್ದೇಶವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts