ರಾತ್ರಿ ಇದ್ದಕ್ಕಿದ್ದಂತೆ ಹಳದಿ ಸೀರೆಯುಟ್ಟ ನಿರ್ಮಲಾ ಚೆನ್ನಪ್ಪ ವಿಚಿತ್ರ ನಡೆಗೆ ಹೆದರಿದ ಬಿಗ್​ಬಾಸ್​ ಸ್ಪರ್ಧಿಗಳು!

Nirmala Chennappa
Published on

ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 8ರ ಶೋ ಒಂದು ವಾರ ಪೂರೈಸುವ ಹಂತಕ್ಕೆ ಬಂದಿದ್ದು, ಈ ವಾರ ಯಾರು ಮನೆಯಿಂದ ಎಲಿಮಿನೇಟ್​ ಆಗ್ತಾರೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ಬಿಗ್​ಬಾಸ್​ ಟಾಸ್ಕ್​ನಿಂದ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದ್ದು, ಒಂದಿಷ್ಟು ವೈಮಸ್ಸಿನ ಜತೆಗೆ ಕಿರಿಕ್​, ಸ್ನೇಹ ಮತ್ತು ಪ್ರೀತಿ ಮಿಶ್ರಣ ಈ ವಾರದ ಶೋನಲ್ಲಿ ಪ್ರೇಕ್ಷರನ್ನ ರಂಜಿಸಿದೆ.

ದಿನ ಕಳೆದಂತೆ ಬಿಗ್​ಬಾಸ್​ ಶೋ ಕುತೂಹಲ ಹೆಚ್ಚಾಗುತ್ತಿದ್ದು, ಇಂದಿನ ಎಪಿಸೋಡ್​ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಆ ಕುತೂಹಲವೇ ನಟಿ, ನಿರ್ದೇಶಕಿ, ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ಅವರು. ನಿರ್ಮಲಾ ಅವರ ದಿಢೀರ್​ ಬದಲಾವಣೆ ಸ್ಪರ್ಧಿಗಳ ಎದೆಯಲ್ಲಿ ಭಯದ ಜತೆಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾತ್ರಿ ಇದ್ದಕ್ಕಿದ್ದಂತೆ ಸೀರೆ ಹುಟ್ಟಿಕೊಂಡು ಇತರೆ ಸ್ಪರ್ಧಿಗಳ ಎದುರು ನಿರ್ಮಲಾ ಪ್ರತ್ಯಕ್ಷರಾಗಿದ್ದಾರೆ. ಅದರಲ್ಲೂ ಹಳದಿ ಸೀರೆ ಹುಟ್ಟಿಕೊಂಡ ಅವರ ವಿಚಿತ್ರ ಭಾವಭಿನಯ ನೋಡಿ ಸ್ಪರ್ಧಿಗಳು ಹೆದರಿದ್ದಾರೆ. ಅವರಿಗೆ ಏನಾಗಿದೆ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.

ಹಾರರ್​ ಲುಕ್ಸ್​ ಎಲ್ಲ ಬರುತ್ತಿದೆ. ನಿರ್ಮಲಾ ಅವರು ಎಲ್ಲರಿಂದ ಏಕಾಂಗಿ ಉಳಿದಿರುವುದು ತುಂಬಾ ಭಯವಾಗ್ತಿದೆ. ಪ್ರೇಕ್ಷಕರ ಕಣ್ಣು ಅವರ ಮೇಲೆ ಹೋಗಲಿ ಎಂದು ಈ ರೀತಿ ಮಾಡುತ್ತಿದ್ದಾರೆಂದು ಸ್ಪರ್ಧಿಗಳ ನಡುವೆಯೇ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಮೋವನ್ನು ಕಲರ್ಸ್​ ಕನ್ನಡ ಬಿಡುಗಡೆ ಮಾಡಿದ್ದು, ಇದೊಂದು ಸೀಕ್ರೆಟ್​ ಟಾಸ್ಕ್​ ಇರಬಹುದೆಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಎಲ್ಲರ ಕುತೂಹಲಕ್ಕೆ ಇಂದಿನ ಎಪಿಸೋಡ್​ ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net