More

    VIDEO| ಖಾಸಗಿ ವಿಮಾನದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ ಉದ್ಯಮಿ

    ನವದೆಹಲಿ: ನಾವುಗಳು ಸಾಮಾನ್ಯವಾಗಿ ಮದುವೆಯನ್ನು ಕಲ್ಯಾಣ ಮಂಟಪ, ದೇವಸ್ಥಾನ ರೆಸಾರ್ಟ್​ಗಳಲ್ಲಿ ಮಾಡುವುದನ್ನು ನೋಡಿರುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಡೆಸ್ಟಿನೇಷನ್​ ವೆಡ್ಡಿಂಗ್​ ಎಂಬ ಪರಿಕಲ್ಪನೆಯು ಚಾಲ್ತಿಗೆ ಬಂದಿದ್ದು, ಇದೀಗ ಅದೇ ರೀತಿಯ ಮದುವೆಯೊಂದು ಅದ್ದೂರಿಯಾಗಿ ನೆರವೇರಿದೆ.

    UAEನಲ್ಲಿ ನೆಲೆಸಿರುವ ಭಾರತ ಮೂಲದ ಉದ್ಯಮಿ ದಿಲೀಪ್​ ಪೋಪ್ಲಿ ಎಂಬುವವರು ತಮ್ಮ ಮಗಳ ಮದುವೆಯನ್ನು ಖಾಸಗಿ ವಿಮಾನದಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದು, ಇದರ ಪೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಖಾಸಗಿ ವಿಮಾನ ಸಂಖ್ಯೆ ಬೋಯಿಂಗ್​ 747ರಲ್ಲಿ ಶುಭ ಸಮಾರಂಭವನ್ನು ನೆರವೇರಿಸಲಾಗಿದೆ.

    ಇದನ್ನೂ ಓದಿ: ತೆಲಂಗಾಣ ಚುನಾವಣೆ; ಯುವಕರ ಜತೆ ರಾಹುಲ್ ಗಾಂಧಿ ಸಂವಾದ; ಮುಂದಿನ ಪ್ರಧಾನಿ ನೀವೇ ಎಂದ ಜನಸ್ತೋಮ

    ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನದ ಒಳಭಾಗದಲ್ಲಿ ಪ್ರಸಿದ್ದ ಬಾಲಿವುಡ್​ ಹಾಡೊಂದಕ್ಕೆ ಜನರು ಹೆಜ್ಜೆ ಹಾಕುತ್ತಿದ್ದು, ಬಳಿಕ ಸಮಾರಂಭಕ್ಕಾಗಿ ಗೊತ್ತುಪಡಿಸಿರುವಂತಹ ಜಾಗಗಳನ್ನು ಸಹ ತೋರಿಸಲಾಗುತ್ತದೆ. ಬಳಿಕ ಮಾತನಾಡಿರುವ ನವದಂಪತಿಗಳು ನಾವು ಈ ರೀತಿಯ ವಿಭಿನ್ನವಾದ ಅನುಭವವನ್ನು ಪಡೆಯುತ್ತೇವೆ ಎಂದು ಭಾವಿಸಿರಲಿಲ್ಲ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗು ಧನ್ಯವಾದಗಳು ಎಂದು ವಿಡಿಯೋ ಕೊನೆಯಲ್ಲಿ ಹೇಳಿದ್ದಾರೆ.

    ವಧು ಹಾಗೂ ವರನ ಕುಟುಂಬಸ್ಥರು ಶುಭ ಸಮಾರಂಭ ನಡೆಯುವ ವೇಲೆ ಮೂರು ಘಂಟೆಗಳ ಕಾಲ ದುಬೈನಿಂದ ಓಮನ್​ಗೆ ವಿಮಾನದಲ್ಲಿ ತೆರಳಿದ್ದರು ಎಂದು ತಿಳಿದು ಬಂದಿದೆ. ಅಚ್ಚರಿಯ ವಿಚಾರವೇನೆಂದರೆ ವಧುವಿನ ತಂದೆ ದಿಲೀಪ್​ ಪೋಪ್ಲಿ ಸಹ 1994ರಲ್ಲಿ ಇದೇ ರೀತಿ ವಿವಾಹ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts