More

    ರೌಡಿ ಬೇಬಿ ಗುಂಗಲ್ಲಿ ದಿವ್ಯಾ ಸುರೇಶ್​; ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗೆ ಸಿನಿಮಾ ಅವಕಾಶ

    ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ‘ರೌಡಿ’ ಆಗಿದ್ದಾರೆ. ಹಾಗೆಂದ ಮಾತ್ರಕ್ಕೆ ರಿಯಲ್ ರೌಡಿಯಲ್ಲ. ಬದಲಿಗೆ ‘ರೌಡಿ ಬೇಬಿ’ ಶೀರ್ಷಿಕೆಯ ಚಿತ್ರದಲ್ಲಿ ದಿವ್ಯಾ ನಟಿಸಿದ್ದಾರೆ. ಈ ಹಿಂದೆಯೇ ಈ ಸಿನಿಮಾ ವಿಚಾರ ಸುದ್ದಿಯಾಗಿತ್ತಾದರೂ, ಅಷ್ಟೊಂದು ಸದ್ದು ಮಾಡಿರಲಿಲ್ಲ. ಇದೀಗ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಿದೆ. ‘ರೌಡಿ ಬೇಬಿ’, ರೆಡ್ಡಿ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಮೊದಲ ಸಿನಿಮಾ. ಈ ಹಿಂದೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಸದ್ಯ ಬಾಕಿ ಕೆಲಸಗಳತ್ತ ಗಮನಹರಿಸಿದೆ.

    ಎಸ್.ಎಸ್. ರವಿ ಗೌಡ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು 32 ದಿನ ಬೆಂಗಳೂರು, ಮಂಗಳೂರು, ಕೇರಳ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ವಾರ್​ಫುಟ್ ಸ್ಟುಡಿಯೋ ಮತ್ತು ಸುಮುಖ ಎಂಟರ್​ಪ್ರೖೆಸಿಸ್ ಸಂಸ್ಥೆಯಡಿ ನಿರ್ವಣವಾಗುತ್ತಿರುವ ಈ ಚಿತ್ರಕ್ಕೆ ಅರ್ವನ್​ಪ-ಅಭಿಷೇಕ್ ಸಂಗೀತ ನೀಡಿದರೆ, ಸಾಮ್ರಾಟ್ ಛಾಯಾಗ್ರಹಣವಿದೆ. ವಿ. ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ ಹಾಗೂ ಕಿನಾಲ್ ರಾಜ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದಿವ್ಯಾ ಸುರೇಶ್ ಜತೆ ಹೀರ್ ಕೌರ್ ಮತ್ತೋರ್ವ ನಾಯಕಿಯಾಗಿದ್ದಾರೆ.

    ಕೋವಿಡ್ ಸೋಂಕಿತರಿಗೆ ‘ಅಕ್ಷರಶಃ ಖುಷಿ’ ಹಂಚಿದ 6 ವರ್ಷದ ಬಾಲಕ; ಅಮ್ಮನ ಅಡುಗೆ ಜತೆ ಮಗನ ಅಳಿಲು ಸೇವೆ

    ಹುಷಾರ್… ಗಾಳಿಯಲ್ಲಿ ಹತ್ತು ಮೀಟರ್ ಚಿಮ್ಮಬಲ್ಲದು ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts