More

    ಹುಷಾರ್… ಗಾಳಿಯಲ್ಲಿ ಹತ್ತು ಮೀಟರ್ ಚಿಮ್ಮಬಲ್ಲದು ಕರೊನಾ!

    ನವದೆಹಲಿ: ಕರೊನಾ ವೈರಸ್ ಒಳಗೊಂಡ ದ್ರವದ ಅತಿ ಸಣ್ಣ ಕಣಗಳು ಗಾಳಿಯಲ್ಲಿ ಹತ್ತು ಮೀಟರ್‌ನಷ್ಟು ದೂರಕ್ಕೆ ಚಿಮ್ಮಿ ಸಾಗಬಲ್ಲವು. ಸೋಂಕಿತ ವ್ಯಕ್ತಿಯಿಂದ ಸೀನು, ಕೆಮ್ಮಿನಿಂದ ಎರಡು ಮೀಟರ್ ಒಳಗೆ ಬೀಳುವ ದ್ರವದ ಸಣ್ಣ ಕಣಗಳು ಗಾಳಿಯಿಂದ ಹತ್ತು ಮೀಟರ್ ದೂರದವರೆಗೆ ಸಾಗಬಲ್ಲವು. ಲಕ್ಷಣ ರಹಿತ ಸೋಂಕಿತರೂ ವೈರಸ್ ಹರಡಬಲ್ಲರು. ಹೀಗಾಗಿ ಜನರು ಪರಸ್ಪರ ಸಾಕಷ್ಟು ಅಂತರ ಕಾಯ್ದುಕೊಳ್ಳುವುದಲ್ಲದೆ ಎರಡೆರಡು ಮಾಸ್ಕ್‌ಗಳನ್ನು ಧರಿಸುವುದು ಒಳ್ಳೆಯದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

    ಸುಲಭವಾಗಿ ಅನುಸರಿಸಬಹುದಾದ ಹಲವು ಸುರಕ್ಷತಾ ಮಾರ್ಗಸೂಚಿಗಳನ್ನು ಕೇಂದ್ರ ಬಿಡುಗಡೆ ಮಾಡಿದ್ದು, ಮನೆ, ಕಚೇರಿ ಮತ್ತಿತರ ಕಟ್ಟಡಗಳ ಒಳಾಂಗಣದಲ್ಲಿ ಗಾಳಿ ಚೆನ್ನಾಗಿ ಸುಳಿದಾಡುವಂತೆ ವೆಂಟಿಲೇಶನ್ ವ್ಯವಸ್ಥೆ ಮಾಡಿಕೊಳ್ಳಬೇಕೆಂದೂ ಸಲಹೆ ನೀಡಿದೆ. ಹಾಗೆ ಮಾಡುವುದರಿಂದ ಒಳಾಂಗಣದಲ್ಲಿ ಸಾಕಷ್ಟು ಶುದ್ಧ ಗಾಳಿ ಹರಡಿ ವಾತಾವರಣದಲ್ಲಿನ ವೈರಲ್ ಲೋಡ್ ಕಡಿಮೆಯಾಗುತ್ತದೆ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ ರಾಘವನ್‌ರ ಕಚೇರಿ ಹೊರಡಿಸಿದ ಹೊಸ ಮಾರ್ಗಸೂಚಿ ಹೇಳಿದೆ.

    ಇದನ್ನೂ ಓದಿ: ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಟ್ಟು ಏರ್‌ಕಂಡಿಷನ್ ಚಾಲೂ ಇಡುವುದು ಸರಿಯಲ್ಲ. ಅದರಿಂದ ಸೋಂಕಿತ ಗಾಳಿ ಕೊಠಡಿಯ ಒಳಗಡೆ ಸೇರುವಂತೆ ಮಾಡಿ ಸೋಂಕಿತರಿಂದ ವೈರಸ್ ಇತರರಿಗೆ ಹರಡುವ ಅಪಾಯ ಹೆಚ್ಚುತ್ತದೆ ಎಂದೂ ಹೇಳಿದೆ.

    500 ರೂಪಾಯಿಗೆ ಲಸಿಕೆ ಮಾರಿ ಸಿಕ್ಕಿಬಿದ್ದ ವೈದ್ಯೆ; ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ಇಬ್ಬರ ಬಂಧನ

    ಆಂಬುಲೆನ್ಸ್​, ಗ್ಯಾಸ್​ ಟ್ಯಾಂಕರ್​ ಮಧ್ಯೆ ಭೀಕರ ಅಪಘಾತ: ರೋಗಿ ಸ್ಥಳದಲ್ಲೇ ಸಾವು, ಚಾಲಕ ಸೇರಿ ಮೂವರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts