ಆಂಬುಲೆನ್ಸ್​, ಗ್ಯಾಸ್​ ಟ್ಯಾಂಕರ್​ ಮಧ್ಯೆ ಭೀಕರ ಅಪಘಾತ: ರೋಗಿ ಸ್ಥಳದಲ್ಲೇ ಸಾವು, ಚಾಲಕ ಸೇರಿ ಮೂವರಿಗೆ ಗಾಯ

ಉತ್ತರಕನ್ನಡ: ಆಂಬುಲೆನ್ಸ್ ಹಾಗೂ ಗ್ಯಾಸ್​ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಬುಲೆನ್ಸ್​ನಲ್ಲಿದ್ದ ರೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾತ್ರವಲ್ಲ ಆಂಬುಲೆನ್ಸ್ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ರಾಮತೀರ್ಥ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಆಂಬುಲೆನ್ಸ್​​ನಲ್ಲಿದ್ದ ರೋಗಿ ರಾಮಕೃಷ್ಣ ಗಣಪತಿ ಪ್ರಸಾದ (70) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಂಬುಲೆನ್ಸ್​ ಗೋಕರ್ಣದಿಂದ ಹೊನ್ನಾವರ ಕಡೆಗೆ ತೆರಳುತ್ತಿತ್ತು. ಗಾಯಾಳು ಚಾಲಕನನ್ನು ಹಾಗೂ ಆಂಬುಲೆನ್ಸ್​ನಲ್ಲಿದ್ದ ಇನ್ನಿಬ್ಬರನ್ನು ಉಡುಪಿಯ ಖಾಸಗಿ … Continue reading ಆಂಬುಲೆನ್ಸ್​, ಗ್ಯಾಸ್​ ಟ್ಯಾಂಕರ್​ ಮಧ್ಯೆ ಭೀಕರ ಅಪಘಾತ: ರೋಗಿ ಸ್ಥಳದಲ್ಲೇ ಸಾವು, ಚಾಲಕ ಸೇರಿ ಮೂವರಿಗೆ ಗಾಯ