ಸಕ್ಕರೆ ನಾಡಿನ ನುಡಿ ಜಾತ್ರೆಯಲ್ಲಿ ಭೂರಿ ಭೋಜನ: ಮೊದಲ ದಿನ ಏನೇನಿರಲಿದೆ? ಇಲ್ಲಿದೆ ನೋಡಿ ಊಟದ ಮೆನು… Mandya Sahitya sammelana

Mandya Sahitya sammelana

Mandya Sahitya sammelana : ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕನ್ನಡ ಡಿಂಡಿಮ ಮೊಳಗಲಿದೆ. ಇಡೀ ಮಂಡ್ಯ ಹಳದಿ-ಕೆಂಪು ಬಾವುಟದಿಂದ ಕಂಗೊಳಿಸುತ್ತಿದ್ದು, ಕನ್ನಡಿಗರನ್ನು ಕೈಬೀಸಿ ಕರೆಯುತ್ತಿದೆ. ಹೌದು, ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ ಆರಂಭವಾಗಿದೆ. ಕನ್ನಡಿಗರು ಹಾಗೂ ಸಾಹಿತ್ಯ ಪ್ರಿಯರೆಲ್ಲ ಮಂಡ್ಯದತ್ತ ಸಾಗಿದ್ದಾರೆ. ಈ ಅಕ್ಷರ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಸಂಭ್ರಮಿಸಲು ಸರ್ಕಾರ ಸಕಲ ವ್ಯವಸ್ಥೆಗಳನ್ನು ಮಾಡಿದ್ದು, ಸಮ್ಮೇಳನಕ್ಕೆ ಬರುವವರಿಗೆ ಭೂರಿ ಭೋಜನ ಕೂಡ ಏರ್ಪಾಡಾಗಿದೆ. ನುಡಿ ಜಾತ್ರೆಯ ಊಟದ ಮೆನು ಕೇಳಿದರೆ ನಿಮ್ಮ ಬಾಯಲ್ಲಿ ನೀರು ತುಂಬಿಕೊಳ್ಳುವುದು ಖಚಿತ.

ಸಾರ್ವಜನಿಕರಿಗೆ ಊಟ ಬಡಿಸಲು 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್ ತೆರೆಯಲಾಗಿದ್ದು, ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ. ಉತ್ತರ ಕರ್ನಾಟಕ ಶೈಲಿಯ ಆಹಾರದ ಜತೆಗೆ ಸ್ಥಳೀಯ ಆಹಾರವನ್ನು ಕೂಡ ತಯಾರಿಸಲಾಗಿದೆ. 500ಕ್ಕೂ ಅಧಿಕ ಬಾಣಸಿಗರು ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಗೆ ಊಟವನ್ನು ಸಿದ್ಧಪಡಿಸುತ್ತಿದ್ದಾರೆ. ಊಟದ ಮೆನು ನೋಡಿದರೆ ಅಬ್ಬಾಬ್ಬಾ ಎನಿಸದೇ ಇರದು.

ಅಂದಹಾಗೆ ಮಂಡ್ಯದ ಅಪೂರ್ವ ವೆಜ್ ಹೋಟೇಲ್ ಈ ಎಲ್ಲ ಭೋಜನದ ವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಬೆಳಗಿನ ಉಪಾಹಾರವಾಗಿ ಇಡ್ಲಿ, ತಟ್ಟೆ ಇಡ್ಲಿ, ವಡೆ, ಚಟ್ನಿ, ಖಾರ ಬಾತ್, ಸಾಂಬಾರ್‌, ಉಪ್ಪಿಟ್ಟು, ಮೈಸೂರು ಪಾಕ್, ಕಾಫಿ ಮತ್ತು ಟೀ ವ್ಯವಸ್ಥೆ ಮಾಡಲಾಗಿದೆ.

ಮಧ್ಯಾಹ್ನದ ಊಟಕ್ಕೆ ಭಾರಿ ಭೋಜನವೇ ಇದೆ. ಕಾಯಿ ಹೋಳಿಗೆ, ಬದನೆಕಾಯಿ ಎಣ್ಣೆಗಾಯಿ, ಜೋಳದ ರೊಟ್ಟಿ, ಚಟ್ನಿ ಪುಡಿ, ಮೆಂತ್ಯ ಬಾತ್‌, ಅನ್ನ, ಮೊಳಕೆ ಸಾರು, ಸಾಂಬಾರ್, ಉಪ್ಪು, ಉಪ್ಪಿನಕಾಯಿ, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ ಹಾಗೂ ಸಲಾಡ್‌ ಇರಲಿದೆ. ಇದನ್ನು ಕೇಳುತ್ತಿದ್ದರೆ ನಿಮ್ಮ ಬಾಯಲ್ಲಿ ನೀರೂರಬಹುದು.

ಇದನ್ನೂ ಓದಿ: ವಿಜಯ್​-ತ್ರಿಷಾ ಒಟ್ಟಿಗಿರುವ ಫೋಟೋ-ವಿಡಿಯೋ ಸೋರಿಕೆ: ಸ್ಫೋಟಕ ಹೇಳಿಕೆ ನೀಡಿದ ಅಣ್ಣಾಮಲೈ​! K Annamalai

ಇನ್ನು ರಾತ್ರಿಯ ಊಟ ಕೂಡ ಇರಲಿದೆ. ಅದಕ್ಕಾಗಿ ಪೂರಿ, ಸಾಗು, ಹಾರ್ಲಿಕ್ಸ್ ಬರ್ಫಿ, ಅವರೆಕಾಳು ಬಾತ್, ರಾಯಿತ, ಉಪ್ಪು, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್‌, ಉಪ್ಪಿನಕಾಯಿ ಹಾಗೂ ಅಪ್ಪಳವನ್ನು ವ್ಯವಸ್ಥೆ ಮಾಡಲಾಗಿದೆ.

ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಸಾಹಿತ್ಯದ ರುಚಿಯ ಜತೆಗೆ ನಾಲಿಗೆ ರುಚಿಯನ್ನು ಸಹ ಮೂರು ದಿನಗಳ ನುಡಿ ಜಾತ್ರೆಯಲ್ಲಿ ಸವಿಯಬಹುದು.

ಗೊ.ರು.ಚ. ಅವರಿಗೆ ವಿಶೇಷ ಆತಿಥ್ಯ: 87ನೇ ನುಡಿಜಾತ್ರೆಯ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಡಿ.19ರಂದು ಮಂಡ್ಯಕ್ಕೆ ಆಗಮಿಸಿದ್ದಾರೆ. ನಿನ್ನೆ ಸಂಜೆ 4.30ಕ್ಕೆ ನಗರದ ಹೊರವಲಯದಲ್ಲಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ನಿವಾಸಕ್ಕೆ ಕರೆದ್ಯೊಯ್ದು ವಿಶೇಷ ಆತಿಥ್ಯ ನೀಡಲಾಯಿತು.

ಅಂದಹಾಗೆ ಲಕ್ಷಾಂತರ ಜನರು ಭಾಗಿಯಾಗುವ ಕನ್ನಡದ ಹಬ್ಬ ಮಂಡ್ಯ ನಗರದ 6 ಕಿ.ಮೀ. ದೂರದ ಹೊರವಲಯದಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ನಡೆಯುತ್ತಿದೆ. ಸಮ್ಮೇಳನಕ್ಕೆ ದೀಪಾಲಂಕಾರ ಮೆರುಗು ನೀಡಿದೆ. ದಸರಾ ಮಾದರಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರವಿದೆ.

ಕಚ್ಚಿದಾಗ ಯಾವ ಹಾವು ಎಷ್ಟು ವಿಷ ಬಿಡುಗಡೆ ಮಾಡುತ್ತೆ? ಯಾವುದು ಡೇಂಜರಸ್​? ಇಲ್ಲಿದೆ ಅಚ್ಚರಿ ಮಾಹಿತಿ… Unknown Facts

ಶೀಘ್ರದಲ್ಲೇ ಭಾರತಕ್ಕೆ ಗುಡ್​ಬೈ ಹೇಳಲಿದ್ದಾರೆ ವಿರಾಟ್​ ಕೊಹ್ಲಿ! ಗುರುವಿನಿಂದಲೇ ಅಚ್ಚರಿ ಹೇಳಿಕೆ | Virat Kohli

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…