ಆತಂಕ ಮೂಡಿಸಿದ ಮಕ್ಕಳ ನಾಪತ್ತೆ ಪ್ರಕರಣ: ಮರಳಿ ಮನೆಯಂಗಳಕ್ಕೆ ಕಾಲಿಟ್ಟ 126 ಮಕ್ಕಳು| Missing case

childabuse
Published on

Missing case : ಮುಂಬೈನ ಭಿವಂಡಿಯಲ್ಲಿ ಮಕ್ಕಳು ಕಾಣೆಯಾತ್ತಿರುವ ವಿಷಯ ಗಮನಾರ್ಹವಾಗಿ ಉಲ್ಬಣಗೊಂಡ ಹಿನ್ನಲೆ ಸಾರ್ವಜನಿಕರು ಆತಂಕಕೊಳಗಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ 142 ಮಕ್ಕಳು ಕಾಣೆಯಾಗಿದ್ದು, ಅದರಲ್ಲಿ 47 ಹುಡುಗರು ಹಾಗೂ 95 ಹುಡುಗಿಯರು ಎಂದು ತಿಳಿದುಬಂದಿದೆ. ಇನ್ನು ಪೊಲೀಸರು ವಿಚಾರಣೆ ನಡೆಸಿದ್ದು, 126 ಮಕ್ಕಳನ್ನು ಪತ್ತೆಹಚ್ಚಿ ಮರಳಿ ಅವರ ಕುಟುಂಬಕ್ಕೆ ಸೇರಿಸಿದ್ದಾರೆ.

ಅಪ್ರಾಪ್ತ ವಯಸ್ಕರ ಅಪಹರಣ ಪ್ರಕರಣಗಳು ಸ್ಥಳೀಯ ಕಾನೂನು ಸಂಸ್ಥೆಗಳಿಗೆ ಸವಾಲುಗಳಾಗಿದ್ದು, ಈ ಬಗ್ಗೆ ಪೊಲೀಸರು ಅಪಹರಣ ಕೇಸುಗಳನ್ನು ದಾಖಲಿಸಿ, ಮಕ್ಕಳನ್ನು ಹುಡುಕಲು ಬೇಕಾಗುವ ತಾಂತ್ರಿಕ ಸಾಧನಗಳಾದ ಸಿಸಿಟಿವಿ ದೃಶ್ಯಾವಳಿಗಳ ಬೆನ್ನಟ್ಟಿದ್ದಾರೆ. ಕಾಣೆಯಾದ ಹೆಣ್ಣುಮಕ್ಕಳಲ್ಲಿ ಹೆಚ್ಚು ಹುಡುಗಿಯರನ್ನು ಸಂಬಂಧಗಳಿಗೆ ಆಕರ್ಷಿಸಿ ಬೇರೆ ರಾಜ್ಯಗಳಿಗೆ ಅಪಹರಿಸಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ವ್ಯಕ್ತಿಗಳನ್ನು ಪತ್ತೆಹಚ್ಚಲು ಬೇರೆ ರಾಜ್ಯದ ಪೊಲೀಸರುಗಳೊಂದಿಗೆ ಇಲ್ಲಿನ ಅಧಿಕಾರಿಗಳು ಸಂಬಂಧ ಹೊಂದಿದ್ದಾರೆ.

ಯಾವ ಕಾರಣಗಳಿಂದ ಮನೆ ತೊರೆದಿದ್ದಾರೆ?

ಕೌಟುಂಬಿಕ ಕಲಹ, ಶೈಕ್ಷಣಿಕ ಒತ್ತಡ, ಪಾಲಕರ ಆಮೀಷ, ಪ್ರೀತಿ ಅನ್ವೇಷಣೆಗಳು ಸೇರಿದಂತೆ ಇನ್ನಿತರ ಕಾರಣಗಳಿಂದ ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ಹೇಳುತ್ತಿವೆ.

ದತ್ತಾಂಶಗಳ ಪ್ರಕಾರ, ಪರೀಕ್ಷೆ ನಂತರದ ಸಮಯದಲ್ಲಿ ಅತೀ ಹೆಚ್ಚು ಮಕ್ಕಳು ಅಪಹರಣ ಆಗುತ್ತಾರೆ .ಜನವರಿ ಹಾಗೂ ಜೂನ್​ ಮಧ್ಯದಲ್ಲಿ 142 ಮಕ್ಕಳು ಕಾಣೆಯಾಗಿರುವುದು ಈ ಪ್ರಕರಣಕ್ಕೆ ಸಾಕ್ಷಿಯಾಗಿದ್ದು, ಪಾಲಕರ ಕೋಪ, ಪರೀಕ್ಷೆಯಲ್ಲಿ ಕಡಿಮೆ ಅಂಕ, ಶೈಕ್ಷಣಿಕ ನಿರಾಸೆಗಳು ಮಕ್ಕಳು ಓಡಿಹೋಗಲು ಕಾರಣವಾಗಿವೆ. ಕಾಣೆಯಾಗಿದ್ದ, 142 ಅಪ್ರಾಪ್ತ ವಯಸ್ಕರಲ್ಲಿ 44 ಹುಡುಗರು, 82 ಹುಡುಗಿಯರನ್ನು ಪತ್ತೆಹಚ್ಚಿದ್ದು, ಉಳಿದ 16 ಮಕ್ಕಳ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ.

ಬಿವಾಂಡಿ ಪೊಲೀಸರು ಅಪ್ರಾಪ್ತ ಮಕ್ಕಳನ್ನು ಹುಡುಕಲು ವಿಶೇಷ ತಂಡಗಳನ್ನು ಸ್ಥಾಪಿಸಿದ್ದು, ತನಿಖೆಯಲ್ಲಿ ಶೇ.90ರಷ್ಟು ಮಕ್ಕಳನ್ನು ಪತ್ತೆಹಚ್ಚಿ ಅವರಿಗೆ ಸಮಾಲೋಚನೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ಕೆಲವು ಮಕ್ಕಳು ದೈಹಿಕ ನಿಂದನೆ ಮಾಡಿದ್ದಾರೆ ಎಂದು ತಿಳಿಸಿದ್ದರಿಂದ ಪೋಕ್ಸೋ ಪ್ರಕರಣದ ಅಡಿ ಕೇಸು ದಾಖಲಿಸಿಕೊಂಡು ಮಕ್ಕಳನ್ನು ಮರಳಿ ಅವರ ಮನೆಗೆ ತಲುಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net