ಮಗನ ಮುಂದೆಯೇ ಕಾನ್ಸ್​ಟೆಬಲ್​ ಗಂಡನನ್ನು ಕೊಂದು ಸಾವಿಗೆ ಶರಣಾದ ಮಹಿಳೆ! ಕಾರಣ ಹೀಗಿದೆ... Constable

Constable
Published on

Constable : ಮಹಿಳೆಯೊಬ್ಬರು 7 ವರ್ಷದ ಮಗನ ಸಮ್ಮುಖದಲ್ಲಿಯೇ ತನ್ನ ಪೊಲೀಸ್​ ಕಾನ್ಸ್​ಟೆಬಲ್​ ಪತಿಯನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಅಹಮದಾಬಾದ್ ನಗರದಲ್ಲಿ ನಡೆದಿದೆ.

ಡ್ಯಾನಿಲಿಮ್ಡಾ ಪೊಲೀಸ್ ಲೈನ್‌ನಲ್ಲಿ ದಂಪತಿಗೆ ನೀಡಲಾದ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ರವಿ ಮೋಹನ್ ಸೈನಿ ಸೋಮವಾರ (ಆಗಸ್ಟ್​ 03) ತಿಳಿಸಿದ್ದಾರೆ.

ಅಹಮದಾಬಾದ್​ನಲ್ಲಿ ಎ ಡಿವಿಷನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮುಖೇಶ್ ಪರ್ಮಾರ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ದೀರ್ಘಕಾಲದಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ನಡೆಯುತ್ತಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮೋಹನ್​ ಸೈನಿ ಹೇಳಿದ್ದಾರೆ.

ತಮ್ಮ ಮಗ ಮನೆಯಲ್ಲಿರುವಾಗಲೇ ಬೆಳಗಿನ ವೇಳೆ ದಂಪತಿ ನಡುವೆ ಜಗಳ ನಡೆಯಿತು. ಈ ವೇಳೆ ಸಂಗೀತಾ, ಮರದ ಕೋಲಿನಿಂದ ಮುಖೇಶ್​ ತಲೆಗೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದಾದ ನಂತರ ಸಂಗೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಗೀತಾ ಡೆತ್​ನೋಟ್​ ಬರೆದಿಟ್ಟಿದ್ದು, ವೈವಾಹಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಜಗಳ ನಡೆದಿದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಡಿಸಿಪಿ ಹೇಳಿದರು.

ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇದೇ ವೇಳೆ ಡಿಸಿಪಿ ಮೋಹನ್​ ಸೈನಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net