ಕೀರ್ತಿಶೇಷ ನಾರಾಯಣ ಸನಿಲ್ ಸೇವೆ ಅನನ್ಯ : ಎಚ್.ವಸಂತ ಬೆರ್ನಾಡ್ ಅಭಿಪ್ರಾಯ

New Project (23)
Published on

ಮೂಲ್ಕಿ: ಸಹಕಾರಿ ಕ್ಷೇತ್ರ ಅಭಿವೃದ್ಧಿ ಸಹಿತ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹರಿಕಾರರಾಗಿ ಕೀರ್ತಿಶೇಷ ನಾರಾಯಣ ಸನಿಲ್ ಸೇವೆ ಮಾದರಿಯಾಗಿದೆ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದರು.

ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪ್ರೇರಣಾ ಶಕ್ತಿ ಸಹಕಾರಿ ಸಂಘದ ಭೀಷ್ಮ ಎಚ್.ನಾರಾಯಣ ಸನಿಲ್ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಮಾತನಾಡಿ ಸಹಕಾರಿ ಸಂಘಗಳ ಭೀಷ್ಮರಾಗಿ ಸಂಘದ ಪ್ರೇರಣಾ ಶಕ್ತಿಯಾಗಿ ಎಚ್.ನಾರಾಯಣ ಸನಿಲ್ ಸಹಕಾರಿ ಸಂಘಗಳ ಅಭಿವೃದ್ಧಿಗೆ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣೆ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಸಂಘ ನಿರ್ದೇಶಕ ಗಣೇಶ ಅಮೀನ್ ಸಂಕಮಾರ್ ಅವರು ಎಚ್.ನಾರಾಯಣ ಸನಿಲ್ ಅವರಿಗೆ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರ ಸ್ವಾವಲಂಬನೆಗೆ ಸಹಕಾರಿಯಾಗಿ ಸಂಘದಿಂದ ನಿರುದ್ಯೋಗಿ ಆಶ್ರಿಯಾ ಅವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ಸಂಘ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಗೌತಮ್ ಜೈನ್, ಉಮಾನಾಥ ಶೆಟ್ಟಿಗಾರ, ಗಣೇಶ್ ದೇವಾಡಿಗ, ನವೀನ್ ಸಾಲ್ಯಾನ್ ಪಂಜ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

ಸ್ವಸಹಾಯ ಗುಂಪಿನ ಸಂಚಾಲಕಿ ನಿರಂಜಲ ಪ್ರಾರ್ಥಿಸಿದರು. ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು. ಸಿಬ್ಬಂದಿ ಲೋಲಾಕ್ಷಿ ವಂದಿಸಿದರು. ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net