ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಿನ್ನಿಗೋಳಿ ಬಟ್ಟಕೋಡಿ ಪೆಟ್ರೋಲ್ ಬಂಕ್ ಬಳಿ ಸೋಮವಾರ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿದ್ದಾರೆ. ಮೂಲತಃ ಧಾರವಾಡ ಜಿಲ್ಲೆ ಸವದತ್ತಿ ಕಲ್ಲೂರು ನಿವಾಸಿಗಳಾದ ನವೀನ್(26) ಹಾಗೂ ಆತ್ಮಾನಂದ(27) ಮೃತರು.
ಕಿನ್ನಿಗೋಳಿ ಸಮೀಪದ ಪದ್ಮನ್ನೂರು ಹಾಗೂ ಮೂಲ್ಕಿಯಲ್ಲಿ ವಾಸವಿದ್ದ ಇವರು ಪದ್ಮನ್ನೂರಿನಿಂದ ಕಿನ್ನಿಗೋಳಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬಟ್ಟಕೋಡಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ವೇಳೆ ಮೃತಪಟ್ಟಿದ್ದಾರೆ.
ನವೀನ್ ಹಾಗೂ ಆತ್ಮಾನಂದ ಪದ್ಮನ್ನೂರು ಬಳಿ ರೆಡಿಮೇಡ್ ಆವರಣ ಗೋಡೆ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನವೀನ್ ಕುಮಾರ್ ವಿವಾಹಿತರಾಗಿದ್ದು, ಆತ್ಮಾನಂದ ಅವಿವಾಹಿತರಾಗಿದ್ದರು. ಬೈಕ್ ಡಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಕಿನ್ನಿಗೋಳಿ ವಿಭಾಗದ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೂರು ದಿನದಲ್ಲಿ ಎರಡು ಅಪಘಾತ:
ಮೂರು ದಿನದ ಅಂತರದಲ್ಲಿ ಇಲ್ಲಿ ಎರಡು ಅಪಘಾತ ಸಂಭವಿಸಿದ್ದು, ಮೂವರು ಜೀವ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಸಂತ್‌ರಾಜ್ ಭೇಟಿ ನೀಡಿದರು. ಬಟ್ಟಕೋಡಿಯಿಂದ ಐಕಳವರೆಗೆ ಸೂಚನಾ ಫಲಕ ಮತ್ತು ಅಗತ್ಯ ಸ್ಥಳಗಳಲ್ಲಿ ರಸ್ತೆ ಉಬ್ಬು ನಿರ್ಮಿಸುವಂತೆ ಪೊಲೀಸರು ಲೋಕೋಪಯೋಗಿ ಇಂಜಿನಿಯರ್‌ಗೆ ಮನವಿ ಮಾಡಿದ್ದಾರೆ.
ಮೇಲ್ಸೇತುವೆ ಕೆಳಗಡೆ ವ್ಯಾಪಾರಿಗಳದ್ದೇ ಅಬ್ಬರ : ತೊಕ್ಕೊಟ್ಟು ಪೇಟೆ ಅಂದಗೆಡಿಸುತ್ತಿರುವ ಬೀದಿ ವ್ಯಾಪಾರ
ಯೋಗಾಭ್ಯಾಸದಿಂದ ಲವಲವಿಕೆ ಜೀವನ ಸಾಧ್ಯ : ಯೋಗ ಗುರು ಜಯ ಮುದ್ದು ಶೆಟ್ಟಿ ಅಭಿಪ್ರಾಯ