ಸರಳ ಭಾಷೆಯಲ್ಲಿ ಸಾಮಾಜಿಕ ಕ್ರಾಂತಿ ಮಾಡಿದವರು : ಉಪತಹಸೀಲ್ದಾರ್ ರಾಜೇಶ್ ನೈಾಕ್ ಬಣ್ಣನೆ

Kanakadasaru
Published on

ಬಂಟ್ವಾಳ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಮಟ್ಟದ ಭಕ್ತ ಕನಕದಾಸ ಜಯಂತಿಯನ್ನು ಸೋಮವಾರ ಬಿ.ಸಿ.ರೋಡಿನ ಆಡಳಿತ ಸೌಧದ ಸಭಾಂಗಣದಲ್ಲಿ ಆಚರಿಸಲಾಯಿತು.

ಉಪತಹಸೀಲ್ದಾರ್ ರಾಜೇಶ್ ನೈಾಕ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಸ ಸಾಹಿತ್ಯದ ಮೂಲಕ ಜೀವನ ಪಾಠ ಸಾರಿ, ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಕನಕದಾಸರು ಸಂತವರೇಣ್ಯರು ಎಂದರು.

ಉಪತಹಸೀಲ್ದಾರ್ ನವೀನ್ ಬೆಂಜನಪದವು ಮಾತಾನಾಡಿ, ಭಗವಂತನನ್ನು ಕೂಡ ತನ್ನ ಬಳಿಗೆ ಸೆಳೆದು, ನಮ್ಮ ತುಳುನಾಡಿನ ಉಡುಪಿಯಲ್ಲಿ ಕನಕ ಕಿಂಡಿಯ ಮುಖಾಂತರ ಶ್ರಿ ಕೃಷ್ಣನ ದರ್ಶನ ಪಡೆದವರು ಕನಕದಾಸರು. ಶ್ರೇಷ್ಠ ವಿಚಾರಗಳನ್ನು ದರ್ಶನ ಮಾಡುವ ಅವಕಾಶ ಕನಕ ಜಯಂತಿಯಂದು ಸಿಗಲಿ ಎಂದು ಹೇಳಿದರು.

ಆಹಾರ ನಿರೀಕ್ಷಕ ಎಂ.ಎನ್ ರವಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net