

ಕಡಬ: ಕುಟ್ರುಪ್ಪಾಡಿ ಗ್ರಾಮದ ಶ್ರೀ ಕ್ಷೇತ್ರ ಕಲ್ಮಲೆ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಶಶಾಂಕ್ ಗೋಖಲೆ, ಕಾರ್ಯದರ್ಶಿ ಧರ್ಣಪ್ಪ ಮಡಿವಾಳ ಹಳ್ಳಂಗೇರಿ, ಕೋಶಾಧಿಕಾರಿ ಶಿವಣ್ಣ ಗೌಡ ಬಿ.ಎಚ್.ಭೀಮಗುಂಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಿದಾನಂದ ಗೌಡ ಕೊಡೆಂಕೀರಿ, ಉಪಾಧ್ಯಕ್ಷ ಬಾಬು ಬಡಬಟ್ಟು, ಕಾರ್ಯದರ್ಶಿ ರಮೇಶ್ ಪೆಡ್ಡಣೆ, ಜೊತೆ ಕಾರ್ಯದರ್ಶಿ ಸುರೇಶ್ ಕೊಡಂಕೀರಿ ಕೋಶಾಧಿಕಾರಿಗಳಾದ ಚಿದಾನಂದ ಎಲ್ಯ, ತೀರ್ಥೇಶ್ ಕೊಡಂಕೀರಿ ಸಂಚಾಲಕ ರಮೇಶ್ ಕೆರೆಜಾಲು ಸೇದಂತೆ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
2025 ಜನವರಿ 1ಮತ್ತು 2ರಂದು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಮತ್ತು ನೇಮೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ ಎಂದು ಅಧ್ಯಕ್ಷ ಎಂ.ಶಶಾಂಕ್ ಗೋಖಲೆ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.