ಸಮುದಾಯ ಭಾಷೆ ಬಳಕೆಯಿಂದ ಸೌಹಾರ್ದ :ವಿನಯ ನಾರಾಲು ಬಣ್ಣನೆ

New Project (38)
Published on

ಸುಳ್ಯ: ಸಂವಹನದಲ್ಲಿ ಸಮುದಾಯದ ಭಾಷೆ ಬಳಕೆಯಾದಾಗ ಪರಸ್ಪರ ಪ್ರೀತಿ, ಬಾಂಧವ್ಯ ವೃದ್ಧಿಸುತ್ತದೆ ಎಂದು ಮ್ಯಾರಥಾನ್ ಓಟಗಾರ ವಿನಯ ನಾರಾಲು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮಂಡೆಕೋಲು ಗ್ರಾಮ ಗೌಡ ಸಮಿತಿ ಆಶ್ರಯದಲ್ಲಿ ಡಿ.1ರಂದು ಮಂಡೆಕೋಲಿನಲ್ಲಿ ನಡೆಯಲಿರುವ ಅರೆಭಾಷೆ ಗಡಿನಾಡ ಉತ್ಸವ ಪ್ರಯುಕ್ತ ಪೇರಾಲು ಶಾಲೆಯಲ್ಲಿ ಸೋಮವಾರ ಆಯೋಜಿಸಲಾದ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿದರು. ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಅಧ್ಯಕ್ಷತೆ ವಹಿಸಿದ್ದರು.

ವಾಲಿಬಾಲ್ ಕ್ರೀಡಾಕೂಟವನ್ನು ಕ್ರೀಡಾಪಟು ದೇವದಾಸ್ ಕುಕ್ಕುಡೇಲು ಉದ್ಘಾಟಿಸಿದರು. ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾಕೂಟ ನಡೆಯಿತು.

ಗ್ರಾಪಂ ಸದಸ್ಯರಾದ ನಾರಾಯಣ ಕೆದ್ಕಾರ್, ತಿಲಕ ಕುತ್ಯಾಡಿ, ತಾರನಾಥ ಕೊಡೆಂಜಿಕಾರ್, ವಕೀಲ ಶ್ರೀಹರಿ ಕುಕ್ಕುಡೇಲು, ಎಸ್.ಡಿ.ಎಂ.ಸಿ. ಅಧ್ಯಕ್ಷ ಮೋಹನದಾಸ್ ಕುಕ್ಕುಡೇಲು, ಗ್ರಾಮ ಮಹಿಳಾ ಘಟಕ ಅಧ್ಯಕ್ಷೆ ದಿವ್ಯಲತಾ ಚೌಟಾಜೆ, ಕಾರ್ಯದರ್ಶಿ ಭಾರತಿ ಯು.ಎಂ, ಗ್ರಾಮ ಗೌಡ ಸಮಿತಿ ಕಾರ್ಯದರ್ಶಿ ದಾಮೋದರ ಮಿತ್ತಪೇರಾಲು, ತರುಣ ಘಟಕ ಸಂಚಾಲಕರಾದ ತೀರ್ಥೇಶ್ ಬಲಂದೋಟಿ, ಕುಸುಮಾಧರ ಮಾವಜಿ, ಗಡಿನಾಡ ಉತ್ಸವ ಸಂಚಾಲಕ ಡಾ.ಎನ್.ಎ.ಜ್ಞಾನೇಶ್, ಪೇರಾಲು ಶ್ರೀರಾಮ ಭಜನಾ ಮಂದಿರದ ರಾಜಣ್ಣ ಮೊದಲಾದವರಿದ್ದರು.

ದಾಮೋದರ ಮಿತ್ತಪೇರಾಲು ಸ್ವಾಗತಿಸಿದರು. ದಿವ್ಯಲತಾ ಚೌಟಾಜೆ ವಂದಿಸಿದರು. ಜಯರಾಜ್ ಕುಕ್ಕೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net