ಪತ್ನಿಯ ಚಿನ್ನಾಭರಣವನ್ನು ಗಿರವಿ ಇಡುವ ಮುನ್ನ ಎಚ್ಚರ! ಹೈಕೋರ್ಟ್​ ತೀರ್ಪು ಏನಿದೆ ನೋಡಿ | Wife gold

Wife gold
Published on

Wife gold: ಪತ್ನಿಯ ಚಿನ್ನಾಭರಣ ಇದೆ ಅಂತ ಆಕೆಯ ಅನುಮತಿ ಇಲ್ಲದೆ ಗಿರವಿ ಇಡುವ ಮುನ್ನ ಎಚ್ಚರ! ಜೈಲು ಶಿಕ್ಷೆಗೆ ಗುರಿಯಾಗಬೇಕಾದೀತು. ಇಂಥದ್ದೊಂದು ಪ್ರಕರಣ ಕೇರಳದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

Gold

ಮದುವೆಗೆ ಉಡುಗೊರೆಯಾಗಿ ಪಡೆದ ಚಿನ್ನವನ್ನು ಅಥವಾ ಪತ್ನಿಗೆ ಸಂಬಂಧಿಸಿದ ಯಾವುದೇ ಚಿನ್ನವನ್ನು ಆಕೆಯ ಅನುಮತಿಯಿಲ್ಲದೆ ಗಿರವಿ ಇಡುವುದು ನಂಬಿಕೆ ದ್ರೋಹ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, ಕಾಸರಗೋಡು ಮೂಲದ ವ್ಯಕ್ತಿಯ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯುವ ಮೂಲಕ ಖಡಕ್​ ಸಂದೇಶವನ್ನು ರವಾನಿಸಿದೆ.

ಬ್ಯಾಂಕ್​ನ ಲಾಕರ್​ನಲ್ಲಿ ಸೇಫ್​ ಆಗಿ ಇಡುವಂತೆ ಪತ್ನಿ ನೀಡಿದ್ದ 50 ಪವನ್ ಚಿನ್ನವನ್ನು ತನ್ನ ಸ್ವಂತ ಬಳಕೆಗಾಗಿ ವ್ಯಕ್ತಿಯೊಬ್ಬ ಬ್ಯಾಂಕ್​ನಲ್ಲಿ ಗಿರವಿ ಇಟ್ಟಿದ್ದ. ಅಲ್ಲದೆ, ಲಾಕರ್​​ನಲ್ಲಿ ಭದ್ರವಾಗಿ ಇಟ್ಟಿರುವುದಾಗಿ ನಕಲಿ ದಾಖಲೆಗಳನ್ನು ಪತ್ನಿಗೆ ತೋರಿಸಿದ್ದ. ಇದರ ನಡುವೆ ಭಿನ್ನಾಭಿಪ್ರಾಯಗಳಿಂದ ಇಬ್ಬರು ಡಿವೋರ್ಸ್​ ಪಡೆದುಕೊಂಡಿದ್ದಾರೆ. ಬಳಿಕ ಪತ್ನಿ ತನ್ನ ಚಿನ್ನಾಭರಣವನ್ನು ವಾಪಸ್ ಕೊಡುವಂತೆ ಬೇಡಿಕೆ ಇಟ್ಟಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ನಂತರ ಮಹಿಳೆ ತನ್ನ ಪತಿ ವಿರುದ್ಧ ಪೊಲೀಸ್ ದೂರು ನೀಡಿದ್ದಳು.

gold

ಈ ಪ್ರಕರಣದ ವಿಚಾರಣೆ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಂಬಿಕೆ ದ್ರೋಹದ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಆರೋಪಿ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದ. ಆದರೆ, ಹೈಕೋರ್ಟ್​ ಕೂಡ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net