ಮುಂಬೈ: ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲುವ ಮೂಲಕ ಟೀಮ್ ಇಂಡಿಯಾ (Team India) ಭಾರೀ ಮುಖಭಂಗವನ್ನು ಅನುಭವಿಸಿದ್ದು, ಮಾಜಿ ಆಟಗಾರರು ತಂಡದ ಪ್ರದರ್ಶವನ್ನು ಟೀಕಿಸುತ್ತಿದ್ದಾರೆ. ಭಾರತ ಮಾತ್ರವಲ್ಲದೇ ಪಾಕಿಸ್ತಾನ, ಇಂಗ್ಲೆಂಡ್ ಸೇರಿದಂತೆ ಅನೇಕ ತಂಡಗಳ ಮಾಜಿ ಆಟಗಾರರು ಟೀಮ್ ಇಂಡಿಯಾವನ್ನು ಹೀಯಾಳಿಸಿ ಮಾತನಾಡುತ್ತಿದ್ದು, ನಾಯಕ ರೋಹಿತ್ ಶರ್ಮ (Rohit Sharma) ಹಾಗೂ ಕೋಚ್ ಗೌತಮ್ ಗಂಭೀರ್ (Gautam Gambhir) ನಿರ್ಧಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಸರಣಿ ಸೋಲಿನ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ನವೆಂಬರ್ 22ರಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ರೋಹಿತ್ ಶರ್ಮ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದ್ದು, ಬಿಸಿಸಿಐ ಬದಲಿ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ಇಡೀ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಲು ಸೂಕ್ತ ನಾಯಕನ ಹುಡುಕಾಟದಲ್ಲಿರುವ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿ ಸುನೀಲ್ ಗವಾಸ್ಕರ್ ಸಲಹೆಯನ್ನುನೀಡಿದ್ದು, ರೋಹಿತ್ ಬದಲು ಈ ಕ್ರಿಕೆಟಿಗನನ್ನು ಆಯ್ಕೆ ಮಾಡುವಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಪ್ರಕಾರ ರೋಹಿತ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲೆರಡು ಪಮದ್ಯದಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ರೋಹಿತ್ ಉಳಿದೆರಡು ಪಂದ್ಯಗಳಿಗೆ ಆಟಗಾರನಾಗಿ ಹೋಗಿ ತಂಡವನ್ನು ಕೂಡಿಕೊಳ್ಳಬೇಕು. ನನ್ನ ಪ್ರಕಾರ ಈ ಪ್ರವಾಸದಲ್ಲಿ ಉಒನಾಯಕನನ್ನು ನಾಯಕನನ್ನಾಗಿ ನೇಮಿಸುವುದು ಸೂಕ್ತ.
ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಗೆದ್ದಿದ್ರೆ ಮಾತು ಬೇರೆಯೇ ಇರುತ್ತಿತ್ತು. ಆದರೆ, ನಾವು ಇಲ್ಲಿ ಸರಣಿಯನ್ನು ಸೋತಿದ್ದು, ನೂತನ ನಾಯಕನ ಅವಶ್ಯಕತೆಯಿದೆ. ಆರಂಭಿಕ ಪಂದ್ಯಗಳಿಗೆ ನಾಯಕ ಅಲಭ್ಯರಾಗಿರುವ ಕಾರಣ ಬೇರೆ ಆಟಗಾರನನ್ನು ನೇಮಿಸುವುಸು ಸೂಕ್ತ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಹೇಳಿದ್ದಾರೆ.