ಯುವಕನ ಜತೆ ಆಂಟಿ ಲವ್ವಿಡವ್ವಿ: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಕೊಂದ ಕಿರಾತಕಿ

Woman and young Man
Published on

ಬೆಂಗಳೂರು: ಸೋಲದೇವನಹಳ್ಳಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಈ ಪ್ರಕರಣ ಸಂಬಂಧ ಕೊಲೆ ಆರೋಪದ ಮೇಲೆ ಮೃತನ ಪತ್ನಿ ಹಾಗೂ ಪ್ರಿಯಕರನನ್ನು ಬಂಧಿಸಲಾಗಿದೆ.

ದಾಸೇಗೌಡ (48) ಕೊಲೆಯಾದ ವ್ಯಕ್ತಿ. ಮೃತನ ಪತ್ನಿ ಜಯಲಕ್ಷ್ಮಿ (32) ಹಾಗೂ ಆಕೆಯ ಪ್ರಿಯಕರ ರಾಜೇಶ್ (26) ಎಂಬುವರನ್ನು ಬಂಧಿಸಲಾಗಿದೆ. ದಾಸೇಗೌಡ ಮೂಲತಃ ರಾಮನಗರದವನಾಗಿದ್ದ. ಕುಟುಂಬ ಸಮೇತ ಬೆಂಗಳೂರಿನ ಸೋಮಶೆಟ್ಟಿ ಹಳ್ಳಿಯಲ್ಲಿ ವಾಸವಾಗಿದ್ದ. ದಾಸೇಗೌಡ ನಾಪತ್ತೆಯಾಗಿದ್ದ ಬಗ್ಗೆ ನ.28 ರಂದು ಸ್ವತಃ ದಾಸೇಗೌಡನ ಪತ್ನಿ ಜಯಲಕ್ಷ್ಮಿಯೇ ಸೋಲದೇವನಹಳ್ಳಿಯಲ್ಲಿ ಪ್ರಕರಣ ಪ್ರಕರಣ ದಾಖಲಿಸಿದ್ದಳು.

ಇದಾದ ಬಳಿಕ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ನಂತರ ದಾಸೇಗೌಡನ ಪತ್ನಿ ಸೇರಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಕೇಸ್ ಸಂಬಂಧ ದಾಸೇಗೌಡನ ಪತ್ನಿ ಮತ್ತು ಪ್ರಿಯಕರನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net