ಕೆ.ಆರ್​. ಮಾರುಕಟ್ಟೆಯಲ್ಲಿ ನೋಟಿನ ಮಳೆ! ಮುಗಿಬಿದ್ದ ಜನರು, ಕುತ್ತಿಗೆಯಲ್ಲಿ ಗಡಿಯಾರ ಹಾಕಿಕೊಂಡವನ ಹುಚ್ಚಾಟ

Money Rain
Published on

ಬೆಂಗಳೂರು: ಹಣ ಅಂದರೆ ಹೆಣ ಕೂಡ ಬಾಯಿಬಿಡುತ್ತದೆ ಎಂಬ ಮಾತಿದೆ. ಹಣಕ್ಕೋಸ್ಕರ ಏನು ಬೇಕಾದರೂ ಮಾಡುವವರಿದ್ದಾರೆ. ಅಂತಹುದರಲ್ಲಿ ಮೇಲಿಂದ ನೋಟಿನ ಮಳೆ ಸುರಿದರೆ ಯಾರಾದರೂ ಬಿಡುತ್ತಾರಾ? ನೋವೇ ಚಾನ್ಸೇ ಇಲ್ಲ.

ಬೆಂಗಳೂರಿನ ಕೆ.ಆರ್​. ಮಾರುಕಟ್ಟೆಯಲ್ಲಿ ಇಂದು ನೋಟಿನ ಮಳೆಯಾಗಿದೆ. ವ್ಯಕ್ತಿಯೊಬ್ಬ ಮಾರುಕಟ್ಟೆ ಫೈಓವರ್​ ಮೇಲೆ ನಿಂತು 10 ರೂಪಾಯಿ ನೋಟುಗಳನ್ನು ಕಳೆಗೆ ಎಸೆಯುವ ಮೂಲಕ ಹುಚ್ಚಾಟ ಮೆರೆದಿದ್ದಾನೆ. ಮಳೆಯಂತೆ ಬೀಳುತ್ತಿದ್ದ ನೋಟುಗಳನ್ನು ಪಡೆದುಕೊಳ್ಳಲು ಜನರು ನಾಮುಂದು ತಾಮುಂದು ಅಂತಾ ಪೈಪೋಟಿಗೆ ಬಿದ್ದರು. 10 ರೂಪಾಯಿ ನೋಟಗಳನ್ನು ಎಸೆದ ವ್ಯಕ್ತಿ ಬಳಿಕ ದ್ವಿಚಕ್ರ ವಾಹನದಲ್ಲಿ ಎಸ್ಕೇಪ್​ ಆಗಿದ್ದಾನೆ.

ಈ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿ ಹಾಗೂ ಆಟೋ ಚಾಲಕ ನಾಗರಾಜು, ಯಾರೋ ಬಂದು 10 ರೂಪಾಯಿ ನೋಟುಗಳನ್ನು ಮೇಲಿಂದ ಹಾಕಿ ಹೊರಟರು. ಕೆಳಗಡೆ ಬೀಳುವವರೆಗೂ ಅದು ದುಡ್ಡು ಅಂತಾ ಜನರಿಗೆ ಗೊತ್ತಿರಲಿಲ್ಲ. ಕೆಳಗಡೆ ಬೀಳುತ್ತಿದ್ದಂತೆ ಜನರೆಲ್ಲ ಮುತ್ತಿಕೊಂಡರು. ಸುಮಾರು 2 ರಿಂದ 3 ಸಾವಿರ ರೂ. ಹಣವನ್ನು ಬೀಸಾಕಿದ್ದಾರೆ. ಯಾರೂ ಅಂತಾ ನೋಡುವಷ್ಟರಲ್ಲಿ ಆತ ಅಲ್ಲಿಂದ ಕಾಣೆಯಾಗಿದ್ದ ಎಂದು ತಿಳಿಸಿದ್ದಾರೆ.

ಅರುಣ್​ ಎಂಬಾತನಿಂದ ಹುಚ್ಚಾಟ

ಹಣ ಎಸೆದವನ ಹೆಸರೂ ಕೊನೆಗೂ ಪತ್ತೆಯಾಗಿದೆ. ಅರುಣ್ ಎಂಬಾತನಿಂದ ಈ ಹುಚ್ಚಾಟ ನಡೆದಿದೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಆತ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅರುಣ್​ ಕುತ್ತಿಗೆಯಲ್ಲಿ ದೊಡ್ಡ ಗಡಿಯಾರ ಹಾಕಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net