ನಟ ದರ್ಶನ್​​ ಕೈಗೆ ಯಾಕೆ ಕೋಳ ತೊಡಿಸಿಲ್ಲ; ಎಸ್​ಪಿ ಕೊಟ್ಟ ಸ್ಪಷ್ಟನೆ ಹೀಗಿದೆ

bellary Sp
Published on

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ದಿನ ಕಳೆದಂತೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಇದೀಗ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಈ ಹಿಂದೆ ಖೈದಿಯಾಗಿ ನಟಿಸಿದ್ದ ಜೈಲಿಗೆ ಈಗ ನಿಜವಾಗಿಯೂ ಅಪರಾಧಿಯಾಗಿ ಹೋಗಿರುವುದು ಅವರ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

ಇನ್ನೂ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ವೇಳೆ ಅವರು ಕೂಲಿಂಗ್​ ಗ್ಲಾಸ್​ ಧರಿಸಿರುವುದು, ಕೈಗೆ ಬೇಡಿ ಹಾಕದಿರುವುದು ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಆಸ್ಪದ ಮಾಡಿಕೊಟ್ಟಿವೆ. ಈ ಕುರಿತು ಮಾತನಾಡಿರುವ ಬಳ್ಳಾರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ಈ ಕುರಿತು ಮಾತನಾಡಿದ್ದು, ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್​ ಕೈಯಲ್ಲಿ ಕೋಳ ಇರಲಿಲ್ಲ. ಆರೋಪಿ ದರ್ಶನ್ ಕೈ ನೋವಾಗಿದ್ದರಿಂದ ಕೋಳದ ಬದಲು ಬಟ್ಟೆ ಕಟ್ಟಿದ್ದರು. ದರ್ಶನ್​ ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೇನ್​ಗಳನ್ನು ಬಿಚ್ಚಿಸಲಾಗಿದೆ. ದರ್ಶನ್ ಹಾಕಿಕೊಂಡಿದ್ದ ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಅದೆಷ್ಟು ಪವರ್ ಇದೆ ಎಂದು ಡಾಕ್ಟರ್ ಚೆಕ್ ಮಾಡುತ್ತಿದ್ದಾರೆ.

darshan

ದರ್ಶನ್​ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದ್ದು, ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ. ವದಂತಿಗಳಿಗೆ ಕಿವಿಕೊಡಬೇಡಿ. ಎಲ್ಲರಿಗೂ ಕೊಡುವ ಊಟವನ್ನೇ ದರ್ಶನ್​ಗೂ ಕೊಡುತ್ತೇವೆ. ಕೈಯಲ್ಲಿದ್ದ ಖಡಗ ಟೈಟ್ ಆಗಿತ್ತು, ಹಾಗಾಗಿ ತೆಗೆಯಲಾಗಿತ್ತು. ಕೋಳದ ಬದಲಾಗಿ ಬಟ್ಟೆಯಲ್ಲಿ ಕೈ ಕಟ್ಟಲಾಗಿತ್ತು ಎಂದು ಹೇಳಿದ್ದಾರೆ.

ನಾನು ಜೈಲಿಗೆ ಭೇಟಿ ನೀಡಿದಾದಗ ದರ್ಶನ್​ ಅವರನ್ನು ಮಾತನಾಡಿಸಿಲ್ಲ. ನಾನು ಜೈಲಧಿಕಾರಿಯವರ ಜೊತೆ ಕೆಲಸದ ವಿಚಾರವಾಗಿ ಮಾತನಾಡಬೇಕಿತ್ತು. ಹೀಗಾಗಿ ನಾನು ಜೈಲಿಗೆ ಭೇಟಿ ನೀಡಿದೆ. ಉಳಿದಂತೆ ದರ್ಶನ್​ ಅವರನ್ನು ನಾನು ಭೇಟಿ ಮಾಡಿಲ್ಲ. ಬೆಂಗಳೂರಿನ ವಾತಾವರಣಕ್ಕೂ ಬಳ್ಳಾರಿಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಬಳ್ಳಾರಿ ವಾತಾವರಣಕ್ಕೆ ದರ್ಶನ್​ ಅವರು ಅಡ್ಜಸ್ಟ್​ ಆಗಲೇಬೇಕಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net