

ಬೆಳಗಾವಿ: ಕರೊನಾ ನಿಯಂತ್ರಿಸಲು ಹೇರಲಾಗಿರುವ ವೀಕೆಂಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಕೋವಿಡ್-19 ಭೀತಿಯ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಪತಿಯ ಆರೋಗ್ಯಕ್ಕಾಗಿ ಬೆಳಗಾವಿ ಮಹಿಳೆ ವಹಿಸಿದ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಹೊಟೆಲ್, ಶಾಪ್ ಎಲ್ಲವೂ ಬಂದ್ ಆಗಿರುವ ಹಿನ್ನಲೆಯಲ್ಲಿ ಪತಿ ಊಟಕ್ಕಾಗಿ ಪರದಾಡಬಾರದೆಂದು ಸುಮಾರು 6 ಕಿ.ಮೀ ನಡೆದುಕೊಂಡು ಬಂದು ಪತಿಗೆ ಟಿಫನ್ ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸ್ ಅಲ್ಲಿಖಾನ್ ಬೆಳಗಾವಿಯ ಎಂಡಿಕೂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರೊನಾ ಭೀತಿಯ ನಡುವೆ ಪತಿ ಹಸಿವಿನಿಂದ ಬಳಲಬಾರದೆಂಬ ಕಾಳಜಿಯಿಂದ ಪತ್ನಿ ನೂರ್ಜಹನ್, ತಿಂಡಿ ತಯಾರಿಸಿಕೊಂಡು ಬೆಳಗಾವಿಯ ಎಪಿಎಂಸಿ ಮಾರ್ಕೆಟ್ ಯಾರ್ಡ್ನಿಂದ 6 ಕಿ.ಮೀ ದೂರವಿರುವ ಎಂಡಿಕೂಟ್ವರೆಗೆ ನಡೆದುಕೊಂಡ ಬಂದು ಪತಿಗೆ ತಿಂಡಿ ನೀಡಿದ್ದಾರೆ.
ಪತ್ನಿ ನೀಡಿದ ತಿಂಡಿಯನ್ನು ತಿಂದು ಟ್ರಾಫಿಕ್ ಪೊಲೀಸ್ ಅಲಿಖಾನ್ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿದ್ದು, ಕರೊನಾ ನಿಯಂತ್ರಣದಲ್ಲಿ ಹೋರಾಡುತ್ತಿರುವ ಪೊಲೀಸರ ಶ್ರಮಕ್ಕೆ ಒಂದು ಸಲಾಂ ಹೇಳಲೇಬೇಕು. (ದಿಗ್ವಿಜಯ ನ್ಯೂಸ್)