More

    VIDEO| ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ: ಬದುಕು ಇಷ್ಟೇನಾ ಎನಿಸುವಂತಹ ದೃಶ್ಯವಿದು

    ಬೆಂಗಳೂರು: ಮಹಾಮಾರಿ ಕರೊನಾ ಜಾಗತಿಕವಾಗಿ ಸಾವಿನ ರಣಕೇಕೆ ಹಾಕುತ್ತಿದ್ದು, ಹಿಂದೆಂದೂ ನೋಡಿರದ ಭೀಕರ ಸನ್ನಿವೇಶಗಳನ್ನು ಜಗತ್ತಿನೆದುರು ತೆರೆದಿಡುತ್ತಿದೆ. ಬೆಂಗಳೂರಿನಲ್ಲಿ ಮತ್ತೊಂದು ಮನಕಲುಕುವ ಘಟನೆ ನಡೆದಿದ್ದು, ಮಾನವನ ಬದುಕು ಇಷ್ಟೇನಾ ಎನಿಸುವಂತಿದೆ.

    ಇದನ್ನೂ ಓದಿ: ಪೆಟ್ಟು ತಿಂದರೂ ಸುಮ್ಮನಾಗದ ಚೀನಾ, ಉತ್ತರಾಖಂಡ, ಹಿಮಾಚಲಕ್ಕೂ ವ್ಯಾಪಿಸಿದ ಡ್ರ್ಯಾಗನ್ ಕಬಂಧಬಾಹು

    ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ ಕರೊನಾಗೆ 24 ಮಂದಿ ಬಲಿಯಾಗಿದ್ದಾರೆ. ಸರ್ಕಾರ ನಿಯಮಾವಳಿಗೆ ಪ್ರಕಾರವೇ ಮೃತರ ಅಂತ್ಯಕ್ರಿಯೆ ನಡೆದಿದೆ. ನಿನ್ನೆ ಮೃತಪಟ್ಟ 60 ವರ್ಷದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ವೇಳೆ ಹೃದಯವಿದ್ರಾವಕ ಘಟನೆಯೊಂದು ನಡೆಯಿತು.

    ತಂದೆಯ ಅಂತ್ಯಕ್ರಿಯೆ ವೇಳೆ ಮಗ ಹಾಗೂ ಕುಟುಂಬಸ್ಥರು ಅಲ್ಲಿಯೇ ಇದ್ದರು. ತಂದೆಯ ಶವಕ್ಕೆ ಹೆಗಲು ನೀಡಲಾಗಿಲ್ಲ. ಕನಿಷ್ಠ ಪಕ್ಷ ಕೊನೆಯ ಬಾರಿಗೆ ಅವರ ಮುಖವನ್ನು ನೋಡದೇ, ಅಂತಿಮ ವಿಧಿ ವಿಧಾನ ನೆರವೇರಿಸಲು ಆಗಲಿಲ್ಲವಲ್ಲ ಎಂದು ಕಣ್ಣೀರು ಹಾಕಿದ ಘಟನೆ ಮನಕಲಕುವಂತಿದೆ.

    ಇದನ್ನೂ ಓದಿ: PHOTO GALLERY| ಬರ್ತಡೇ ಗರ್ಲ್​ ಅಂಕಿತಾ: ಕಮಲಿ ಫ್ರೆಂಡ್​ ನಿಂಗಿಯ​ ಬೋಲ್ಡ್ ಲುಕ್ಕಿಗೆ ಫಿದಾ ಆಗೋದು ಗ್ಯಾರೆಂಟಿ!

    ಈ ಮೇಲಿನ ಘಟನೆ ನಡೆದಿರುವುದು ಬೆಂಗಳೂರಿನ ಕುರುಬರಹಳ್ಳಿಯಲ್ಲಿ. 60 ವರ್ಷದ ವ್ಯಕ್ತಿ ಕರೊನಾಗೆ ಬಲಿಯಾಗುತ್ತಾರೆ. ಈ ಹಿಂದೆಯೇ ಹಲವು ರೀತಿಯ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವಿಗೀಡಾಗುತ್ತಾರೆ. ಸರ್ಕಾರದ ನಿಯಮದಂತೆ ಅಂತ್ಯಕ್ರಿಯೆ ನಡೆಯುವ ಜಾಗದಲ್ಲಿ ಕುಟುಂಬಸ್ಥರಿಗೆ ಅನುಮತಿ ನೀಡುವುದಿಲ್ಲ. ಆದರೆ, ಪತ್ನಿ ಮತ್ತು ಮಗನಿಗೆ ಸ್ಥಳೀಯ ಮುಖಂಡರ ನೆರವಿನಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ತಂದೆಯ ಅಂತ್ಯಕ್ರಿಯೆ ನೋಡುವ ಅವಕಾಶವನ್ನು ಮಾಡಿಕೊಡಲಾಯಿತು. ಆದರೆ, ತಂದೆಗೆ ಏನು ಮಾಡಲಾಗಲಿಲ್ಲವಲ್ಲ ಎಂದು ಮಗ ಕಣ್ಣೀರಾಕಿದ್ದು, ಮನಕಲಕುವಂತಿತ್ತು. (ದಿಗ್ವಿಜಯ ನ್ಯೂಸ್​)

    ವೀಕೆಂಡ್​ ಲಾಕ್​ಡೌನ್​ಗೆ ಉತ್ತಮ ಬೆಂಬಲ: ಅನಗತ್ಯ ಹೊರಬಂದವರಿಗೆ ಲಾಠಿ ರುಚಿ ತೋರಿಸುತ್ತಿರೋ ಖಾಕಿ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts