More

    ಮದ್ಯ ಸೇವಿಸಿ ಮಲಗಿದಲ್ಲೇ ಮೃತ್ಯು

    ಕಾರ್ಕಳ: ಬೆಳ್ಮಣ್ ಬಸ್ ನಿಲ್ದಾಣದ ಬಳಿ ರಾಜೇಂದ್ರ ಕೆ.(54) ಎಂಬುವರು ಮಲಗಿದಲ್ಲೇ ಶನಿವಾರ ಮೃತಪಟ್ಟಿದ್ದಾರೆ. ವಿಪರೀತ ಮದ್ಯ ಸೇವಿಸಿ ಆಹಾರ ಸೇವಿಸದ ಕಾರಣ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅವರು ಮನೆಗೂ ಹೋಗದೆ ಕೂಲಿ ಕೆಲಸ ಮಾಡಿ ಅಲೆಮಾರಿ ಜೀವನ ನಡೆಸುತ್ತಿದ್ದು, ರಾತ್ರಿ ಸಮಯ ಎಲ್ಲಿಯಾದರೂ ಮಲಗುತ್ತಿದ್ದರು ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts