ಕಾಣೆಯಾಗಿದ್ದ ಯುವಕ ಮಂಗಳಮುಖಿಯಾಗಿ ಪ್ರತ್ಯಕ್ಷ: ಆತ್ಮಹತ್ಯೆಗೂ ಮುನ್ನ ಸ್ಫೋಟಕ ರಹಸ್ಯ ಬಯಲು!

Love
Published on

ಕಡಪ: ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎಂಬ ಮಾತನ್ನು ಆಗಾಗ ಕೇಳಿರುತ್ತೇವೆ. ಏಕೆಂದರೆ ಚಿತ್ರವಿಚಿತ್ರ ಪ್ರೇಮಿಗಳನ್ನು ನೋಡಿರುತ್ತೇವೆ. ಪ್ರೇಮಿಗಳ ನಡುವೆ ಅನೇಕ ವಿಚಾರಗಳಲ್ಲಿ ಭಾರಿ ವ್ಯತ್ಯಾಸಗಳಿದ್ದರೂ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿಸುವವರನ್ನು ನೋಡಿ ಪ್ರೀತಿ ಕುರುಡು ಎಂದಿದ್ದೇವೆ. ಪ್ರೀತಿ ಯಾರ ಮೇಲೆ? ಯಾವಾಗ? ಹೇಗೆ ಹುಟ್ಟುತ್ತದೆ ಎಂಬುದನ್ನು ವಿವರಿಸಲಾಗದು. ಆದರೆ, ವಿಚಿತ್ರ ಪ್ರೀತಿಯು ಕೆಲವೊಮ್ಮೆ ದುರಂತ ಅಂತ್ಯವಾಗಿಡುತ್ತವೆ ಎಂಬುದಕ್ಕೆ ಈ ಒಂದು ಘಟನೆಯೇ ತಾಜಾ ಉದಾಹರಣೆಯಾಗಿದೆ.

ಮಂಗಳಮುಖಿಯಾಗಿ ಬದಲಾಗಿದ್ದ ಯುವಕನೊಬ್ಬ, ಮತ್ತೊಬ್ಬ ಯುವಕನ ಪ್ರೀತಿಯ ಬಲೆಯಲ್ಲಿ ಬಿದ್ದು, ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಮೆಹಬೂಬ್​ನಗರ ಜಿಲ್ಲೆಯ ನಕ್ಕಲಬಾಂದ ತಾಂಡಾದಲ್ಲಿ ನಡೆದಿದೆ. ತಾನೂ ಪ್ರೀತಿಸುತ್ತಿದ್ದ ಯುವಕ ಬೇರೊಂದು ಯುವತಿ ಜತೆ ಮದುವೆಯಾಗಿದ್ದಕ್ಕೆ ಮನನೊಂದು ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶ್ರೀಕಾಂತ್​ ಎಂಬ ಯುವಕ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ. ಸಾಕಷ್ಟು ಹುಡುಕಾಟ ನಡೆಸಿದ್ದರೂ ಆತನ ಸುಳಿವು ಸಿಕ್ಕಿರಲಿಲ್ಲ. ಅನೇಕ ವರ್ಷಗಳ ಬಳಿಕ ಶ್ರೀಕಾಂತ್​ ಹುಡುಗನಾಗಿರದೇ ಹುಡುಗಿಯಾಗಿ ಬದಲಾಗಿದ್ದ. ಶ್ರೀಕಾಂತ್​ ಹೆಸರು ಸಹ ಬದಲಾಗಿತ್ತು. ಸದ್ಯ ಕಡಪದಲ್ಲಿದ್ದ ಆತನೊಂದಿಗೆ ಇನ್ನು ಮೂವರು ಮುಂಗಳಮುಖಿಯಾಗಿ ಬದಲಾಗಿದ್ದರು. ತನ್ನ ಸೋದರಸಂಬಂಧಿ ವಿನೋದ್​ಗೆ ಕರೆ ಮಾಡಿ ತನ್ನ ಪ್ರೀತಿಯ ವಿಚಾರವನ್ನು ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೊದಲೇ ವಿಷ ಸೇವಿಸಿದ್ದ ಮೃತ ಮಂಗಳಮುಖಿ, ಹುಡುಗನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾಳೆ. ಆದರೆ, ಆ ಯುವಕ ಬೇರೆ ಯುವತಿ ಜತೆ ಮದುವೆಯಾಗಿದ್ದಾನೆ. ಹೀಗಾಗಿ ನಾನು ಸಾಯುತ್ತಿದ್ದೇನೆ ಎಂದು ವಿನೋದ್​ಗೆ ವಾಟ್ಸ್​ಆ್ಯಪ್​ ಕಾಲ್​ನಲ್ಲಿ ಅಳುತ್ತಾ ಹೇಳಿದ್ದಾಳೆ.

ಈ ವಿಚಾರವನ್ನು ವಿನೋದ್​ ಕಡಪ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪರಿಶೀಲಿಸಿದ ಪೊಲೀಸರಿಗೆ, ಶ್ರೀಕಾಂತ್​ ಎಂಬ ಯುವಕ ಶ್ರೀಲೇಖಾ ಆಗಿ ಬದಲಾಗಿರುವುದು ತಿಳಿಯುತ್ತದೆ. ವಿಷ ಸೇವಿಸಿ ತಾನೇ ಆಸ್ಪತ್ರೆಗೆ ಹೋಗಿದ್ದ ಶ್ರೀಲೇಖಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net