More

    ಈ ನೂರು ಆ್ಯಪ್​ಗಳನ್ನು ಹಾಗೇ ಬಿಟ್ಟಿದ್ದಿದ್ದರೆ ಅದೆಷ್ಟು ಜನ ಹಣ ಕಳೆದುಕೊಂಡಿರುತ್ತಿದ್ದರೋ?!

    ನವದೆಹಲಿ: ಆನ್​ಲೈನ್​ ಫ್ರಾಡ್​ಗಳ ಪಟ್ಟಿಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಮತ್ತೊಂದು ವಂಚನಾ ವಿಧಾನ ಎಂದರೆ ಅದು ಲೋನ್​ ಆ್ಯಪ್ಸ್​. ಹೌದು.. ಇನ್​ಸ್ಟಂಟ್​ ಲೋನ್​ ನೀಡುವ ನೆಪದಲ್ಲಿ ಅಕ್ರಮ ಎಸಗುತ್ತಿರುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವೊಂದು ಆ್ಯಪ್​ಗಳು ಆತಂಕಕಾರಿಯಾಗಿ ಪರಿಣಮಿಸಿದ್ದು, ಅವುಗಳನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದುಹಾಕಲಾಗಿದೆ.

    ಈ ಕುರಿತ ಮಾಹಿತಿಯನ್ನು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವೇ ನೀಡಿದೆ. ಲೋನ್ ಆ್ಯಪ್​ಗಳ ಮೂಲಕ ನಡೆಯುತ್ತಿರುವ ಆರ್ಥಿಕ ಅಕ್ರಮಗಳ ಕುರಿತು ಏನು ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸಚಿವಾಲಯ ಉತ್ತರ ನೀಡುವ ವೇಳೆ ಈ ಮಾಹಿತಿಯನ್ನು ನೀಡಿದೆ. 2020ರ ಡಿಸೆಂಬರ್​ನಿಂದ ಈ ಜನವರಿ 20ರ ಒಳಗೆ ಗೂಗಲ್ ಕಂಪನಿಯು 100 ಲೋನ್​ ಆ್ಯಪ್​​ಗಳನ್ನು ಗೂಗಲ್ ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗಿದೆ ಎಂದು ಸಚಿವಾಲಯ ಹೇಳಿದೆ.

    ಇದನ್ನೂ ಓದಿ: ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಇರುವ ಹಲವಾರು ಲೋನ್​ ಆ್ಯಪ್​ಗಳ ಮೂಲಕ ನಡೆಯುತ್ತಿರುವ ಅಕ್ರಮಗಳ ಕುರಿತು ಸಾಕಷ್ಟು ಮಂದಿ ದೂರುಗಳನ್ನು ನೀಡಿದ್ದರು. ಈ ಬಗ್ಗೆ ಗೂಗಲ್ ಗಮನ ಸೆಳೆದಾಗ ಅದು ನೂರಾರು ಲೋನ್​ ಆ್ಯಪ್​ಗಳನ್ನು ಪರಿಶೀಲಿಸಿದ್ದು, ಆ ಪೈಕಿ ನೂರು ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿದ್ದಾಗಿ ತಿಳಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. (ಏಜೆನ್ಸೀಸ್)

    17 ವರ್ಷದ ಮಗನನ್ನು ತಾಯಿಯೇ ಕೊಂದಳು!; ದಿನಾಲೂ ಮಗ ಪೀಡಿಸುತ್ತಿದ್ದುದಾದರೂ ಯಾಕೆ?

    ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts