More

    17 ವರ್ಷದ ಮಗನನ್ನು ತಾಯಿಯೇ ಕೊಂದಳು!; ದಿನಾಲೂ ಮಗ ಪೀಡಿಸುತ್ತಿದ್ದುದಾದರೂ ಯಾಕೆ?

    ಆಂಧ್ರಪ್ರದೇಶ: ಮಕ್ಕಳು ಅಪರಾಧ ಮಾಡಿದಾಗ ತಾಯಿ ಗದರಬಹುದು, ಹೊಡೆಯಬಹುದು ಅಥವಾ ಇನ್ಯಾವುದಾದರೂ ಶಿಕ್ಷೆ ನೀಡಬಹುದು. ಆದರೆ ಮಗನನ್ನು ತಾಯಿಯೇ ಕೊಲ್ಲುವಂಥ ಪ್ರಕರಣ ನಡೆದಿದೆ ಎಂದರೆ ಆ ಬಾಲಕ ಅದಿನ್ನೆಷ್ಟರಮಟ್ಟಿಗೆ ಹಿಂಸೆ ಕೊಟ್ಟಿರಬಹುದು!?

    ಹೌದು… ಗಾಂಜಾವ್ಯಸನಿಯಾಗಿ ದಿನಾ ಕಿರುಕುಳ ನೀಡುತ್ತಿದ್ದ 17 ವರ್ಷದ ಮಗನನ್ನು ತಾಯಿಯೇ ಕೊಂದು ಹಾಕಿದ್ದಾಳೆ. ಗಾಂಜಾ ಸೇವಿಸಲು ಹಣಕ್ಕಾಗಿ ದಿನಾಲೂ ಪೀಡಿಸುತ್ತಿದ್ದ ಮಗನಿಂದಾಗಿ ಬೇಸತ್ತ ತಾಯಿ ಕೊನೆಗೆ ಬೇರೆ ದಾರಿ ಕಾಣದೆ ಆತನನ್ನು ಕೊಂದು, ಕೊನೆಗೂ ಆತನ ಕಾಟದಿಂದ ಪಾರಾದೆ ಎಂದು ಹೇಳಿಕೊಂಡಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಶನಿವಾರ ಈ ಪ್ರಕರಣ ನಡೆದಿದ್ದು, 43 ವರ್ಷದ ತಾಯಿಯೊಬ್ಬರು 17 ವರ್ಷದ ಮಗನನ್ನು ಕೊಂದುಹಾಕಿದ್ದಾರೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಗುತ್ತಿಗೆ ಸ್ವಚ್ಛತಾಕರ್ಮಿ ಆಗಿರುವ ಈ ತಾಯಿಯ ಹೆಸರು ಸುಮಲತಾ. ಈಕೆ ತನ್ನ ಮಗ ಸಿದ್ಧಾರ್ಥನ ಜತೆ ಎಟಿ ಅಗ್ರಹಾರಂ ಎಂಬಲ್ಲಿ ವಾಸಿಸುತ್ತಿದ್ದು, ಆತ ಶಾಲೆ ಬಿಟ್ಟಿದ್ದಲ್ಲದೆ ಮಾದಕದ್ರವ್ಯ ವ್ಯಸನಿಯಾಗಿದ್ದ. ಪತಿ ಮೃತಪಟ್ಟಿದ್ದು ಈಕೆಯೊಬ್ಬರ ದುಡಿಮೆಯಲ್ಲೇ ಇಬ್ಬರ ಜೀವನ ಸಾಗುತ್ತಿದೆ. ಅದಾಗ್ಯೂ ಮಗ ಗಾಂಜಾಕ್ಕಾಗಿ ಹಣ ನೀಡುವಂತೆ ದಿನಾ ಪೀಡಿಸುತ್ತಿದ್ದ. ಶನಿವಾರ ಮನೆಯಿಂದ ಹೊರಬಂದ ಸುಮಲತಾ, ಕೊನೆಗೂ ಅವನ ಕಾಟದಿಂದ ಪಾರಾದೆ ಎನ್ನುತ್ತ ಹೋಗಿದ್ದನ್ನು ಕಂಡ ನೆರೆಮನೆಯವರು ಏನೋ ಆಗಿದೆ ಎಂದು ಮನೆಯೊಳಗೆ ಹೋಗಿ ನೋಡಿದಾಗ, ಸಿದ್ಧಾರ್ಥ ಸತ್ತು ಬಿದ್ದಿರುವುದು ಕಂಡುಬಂದಿತ್ತು. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್)

    ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಸ್ವಂತ ಮಗುವನ್ನು ಭೀಕರವಾಗಿ ಕೊಂದ ಗರ್ಭಿಣಿ ಶಿಕ್ಷಕಿ!

    ಕಾರು ತೊಳೆಯುತ್ತಿದ್ದವ ಮಾಟ ಮಂತ್ರ ಶುರು ಮಾಡಿದ ! ಈಗ ಪೊಲೀಸರ ಅತಿಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts