ಐಶ್ವರ್ಯಾ ರೈ ಹಾಡುವುದಕ್ಕೂ ಸೈ..ಗಾಯನದೊಂದಿಗೆ ನೃತ್ಯ ಮಾಡಿದ ವೀಡಿಯೋ ವೈರಲ್​!

ishwrya
Published on

ಮುಂಬೈ: ಐಶ್ವರ್ಯಾ ರೈ ಕೇವಲ ನಟನೆ ಮತ್ತು ನೃತ್ಯದಲ್ಲಿ ಮಾತ್ರವಲ್ಲದೆ ಗಾಯನದಲ್ಲೂ ಪರಿಣತಿ ಹೊಂದಿದ್ದಾರೆ. ಆಕೆ ಹಾಡುತ್ತಾ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್​ನಲ್ಲಿ ಇಲ್ಲಿಯವರೆಗೆ ಪರಿಣಿತಿ ಚೋಪ್ರಾ, ಶ್ರದ್ಧಾ ಕಪೂರ್ ಮತ್ತು ಆಲಿಯಾ ಭಟ್ ಅವರಂತಹ ನಟಿಯರು ಹಾಡಿರುವುದು ತಿಳಿದ ಸಂಗತಿಯೇ. ಆದರೆ ಈಗ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಗಾಯನ ಪ್ರತಿಭೆಯನ್ನು ವೈರಲ್​ ಆಗಿರುವ ವೀಡಿಯೋದಲ್ಲಿ ನೋಡಬಹುದಾಗಿದೆ.

ವೈರಲ್​ನ ಆಗುತ್ತಿರುವ ವೀಡಿಯೋ 'ಗುಜಾರಿಶ್' ಚಿತ್ರದ ಪ್ರಚಾರ ಕಾರ್ಯಕ್ರಮದ್ದಾಗಿದೆ. ಆ ಚಿತ್ರದ 'ನೀಂದೇನ್ ಆಂಖೋನ್ ಸೆ ಉರಿ' ಹಾಡನ್ನು ಐಶ್ವರ್ಯಾ ವೇದಿಕೆಯಲ್ಲಿ ಹಾಡಿ, ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ನೃತ್ಯ ಮಾಡುತ್ತಿದ್ದಾರೆ. ಈ ವೇಳೆ ಹೃತಿಕ್ ರೋಷನ್ ಕೂಡ ಇವರಿಬ್ಬರ ಜೊತೆ ಸೇರಿಕೊಂಡು ಮೂವರೂ ಒಟ್ಟಿಗೆ ಹಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಹಾಡನ್ನು ಕೇಳಿದ ಜನರು ಸಾಕಷ್ಟು ಪ್ರಭಾವಿತರಾಗುತ್ತಿದ್ದಾರೆ.

ಐಶ್ವರ್ಯಾ ಕೊನೆಯದಾಗಿ 'ಪೊನ್ನಿಯಿನ್ ಸೆಲ್ವನ್ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈಗ ಅವರ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net