ಈಕೆ ಒಂದೇ ಒಂದು Instagram ಪೋಸ್ಟ್​ನಿಂದ ಸಂಪಾದಿಸುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

Mamuda Khan
Published on

ನವದೆಹಲಿ: ಇಂದಿನ ಯುವ ಜನಾಂಗ ಸಾಮಾಜಿಕ ಜಾಲತಾಣದ ಮೂಲಕವೂ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಫೇಸ್​ಬುಕ್​, ಯೂಟ್ಯೂಬ್​ ಹಾಗೂ ಇನ್​ಸ್ಟಾಗ್ರಾಂ ಸಾಕಷ್ಟು ಮಂದಿಯ ಭವಿಷ್ಯವನ್ನೇ ಬದಲಿಸಿದೆ. ಕೆಲವರ ಸಂಪಾದನೆಯ ಬಗ್ಗೆ ಕೇಳಿದರೆ ಒಂದು ಕ್ಷಣ ಹುಬ್ಬೇರುವುದಂತೂ ಗ್ಯಾರಂಟಿ. ಈ ಮೊದಲು ಟಿಕ್​ಟಾಕ್​ ಸ್ಟಾರ್​ ಆಗಿ, ಇದೀಗ ಇನ್​ಸ್ಟಾಗ್ರಾಂ ಇನ್ಫ್ಲುಯೆನ್ಸರ್​ ಆಗಿರುವ ಬ್ಯೂಟಿ ಖಾನ್​ ಸಹ ಈ ಸಾಲಿಗೆ ಸೇರಿಕೊಂಡಿದ್ದಾರೆ.

ಬ್ಯೂಟಿ ಖಾನ್​ ನಿಜವಾದ ಹೆಸರು ಮಮುದಾ ಖತುನ್​. ವಯಸ್ಸು 23 ಕೋಲ್ಕತ ಮೂಲದ ಮಮುದಾಗೆ ಚಿಕ್ಕಂದಿನಿಂದಲೂ ಡಾನ್ಸ್​ ಅಂದರೆ ತುಂಬಾ ಹುಚ್ಚು. ತಾನೊರ್ವ ಡಾನ್ಸರ್​ ಆಗಬೇಕೆಂದು ಕನಸು ಕಂಡಿದ್ದಳು. ಯಾವಾಗ ಟಿಕ್​ಟಾಕ್​ ಪ್ರಚಲಿತಕ್ಕೆ ಬಂತೋ ಮಮುದಾ ಸಿಕ್ಕಾಪಟ್ಟೆ ಫೇಮಸ್​ ಆಗಿಬಿಟ್ಟಳು. ಟಿಕ್​ಟಾಕ್​ ಬ್ಯಾನ್​ ಆದ ಬಳಿಕ ಇನ್​ಸ್ಟಾಗ್ರಾಂನಲ್ಲಿ ತನ್ನ ವಿಡಿಯೋಗಳನ್ನು ಹರಿಬಿಡುವ ಆರಂಭಿಸಿದ ಮಮುದಾ, ಇದೀಗ ಇನ್​ಸ್ಟಾ ಸೆಲೆಬ್ರಿಟಿ ಎಂದೇ ಖ್ಯಾತಿ ಗಳಿಸಿದ್ದಾಳೆ.

ಇನ್​ಸ್ಟಾ ರೀಲ್ಸ್​ ಮಾಡುವುದು ಮಾತ್ರವಲ್ಲದೆ, ಮಮುದಾ ಓರ್ವ ಫ್ಯಾಶನ್​ ಬ್ಲಾಗರ್​, ಮಾಡೆಲ್​ ಮತ್ತು ನಟಿ ಕೂಡ ಹೌದು. ಶಾರ್ಟ್​ ವಿಡಿಯೋ ಕಂಟೆಂಟ್​ನಲ್ಲಿ ಬಹಳ ಹೆಸರು ಮಾಡಿದ್ದಾಳೆ. ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೋಬ್ಬರಿ 12.4 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾಳೆ.

ಕೆಲವೊಂದು ವೆಬ್​ಸೈಟ್​ಗಳ ಪ್ರಕಾರ ಮಮುದಾ, ಒಂದು ಇನ್​​​​ಸ್ಟಾಗ್ರಾಂ ಫೋಸ್ಟ್​ಗೆ 50 ರಿಂದ 1 ಲಕ್ಷ ರೂ. ಚಾರ್ಜ್​ ಮಾಡುತ್ತಾಳೆ ಎಂದು ತಿಳಿದುಬಂದಿದೆ. ಒಂದು ತಿಂಗಳಿಗೆ 2 ಲಕ್ಷ ರೂ. ಸಂಪಾದನೆ ಮಾಡುತ್ತಾಳೆ ಎನ್ನಲಾಗಿದೆ. ಬ್ರ್ಯಾಂಡ್​ ಜಾಹೀರಾತು, ಮಾಡೆಲಿಂಗ್​ ಮತ್ತು ನಟನೆ ಆಕೆಯ ಬಹು ಮುಖ್ಯ ಆದಾಯದ ಮೂಲಗಳು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net