More

    ಕಾರ್ತಿಕ್​ ಮಹೇಶ್​ಗೆ ಒಲಿದ ಬಿಗ್​ಬಾಸ್​ ಸೀಸನ್​ 10ರ ಕಿರೀಟ?! ತವರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ

    ಬೆಂಗಳೂರು: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ಕ್ಕೆ ಇನ್ನು ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ. ವಿನ್ನರ್​ ಯಾರು ಎಂಬುದು ಇನ್ನೇನು ಖಚಿತವಾಗಲಿದೆ ಸದ್ಯಕ್ಕೆ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್ ಹಾಗೂ ವರ್ತೂರು ಸಂತೋಷ್ ಇದಾರೆ. ತುಕಾಲಿ ಸಂತೋಷ್​ ನಿನ್ನೆಯಷ್ಟೇ ಮನೆಯಿಂದ ಹೊರಬಂದಿದ್ದಾರೆ. ಇದೀಗ ವರ್ತೂರು ಸಂತೋಷ್​ ಕೂಡ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

    ವಿಜೇತರು ಯಾರಾಗಲಿದ್ದಾರೆ ಎಂಬ ಕುತೂಹಲದ ನಡುವೆ ಕೆಲವೊಂದಿಷ್ಟು ಸುದ್ದಿಗಳು ಕೂಡ ಹರಿದಾಡುತ್ತಿವೆ. ಸಂಗೀತಾ ಶೃಂಗೇರಿ ಅವರು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಕಾರ್ತಿಕ್​ ಮಹೇಶ್​ ಹೆಸರು ಕೇಳಿಬರುತ್ತಿದೆ. ಫಿನಾಲೆ ಶೂಟಿಂಗ್​ ಮುಂಚಿತವಾಗಿಯೇ ಮುಗಿಯುವುದರಿಂದ ಕೆಲವೊಮ್ಮೆ ವಿಜೇತರ ಹೆಸರು ಮೊದಲೇ ಟಿವಿ ಪರದೆಯಲ್ಲಿ ಘೋಷಣೆಯಾಗುವ ಮುನ್ನ ಮೊದಲೇ ಸೋರಿಕೆಯಾಗಿಬಿಡುತ್ತದೆ. ಈ ಹಿಂದೆಯೂ ಇಂಥಹದ್ದೊಂದು ಕ್ಷಣ ಜರುಗಿದೆ.

    ಇದೀಗ ಕಾರ್ತಿಕ್​ ಮಹೇಶ್​ ಹೆಸರು ಚಾಲ್ತಿಯಲ್ಲಿದ್ದು, ಬಿಗ್​ಬಾಸ್​ ಟ್ರೋಫಿಯ ಜತೆಗೆ 50 ಲಕ್ಷ ರೂ. ಬಹುಮಾನ ಜಯಿಸಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಿದಾಡ ತೊಡಗಿದೆ. ಸಾಮಾಜಿಕ ಜಾಲತಾಣದಲ್ಲೂ ಕಾರ್ತಿಕ್​ ಗೆಲುವು ನ್ಯಾಯಯುತ ಎನ್ನುತ್ತಿದ್ದು, ಎಷ್ಟರಮಟ್ಟಿಗೆ ಈ ಸುದ್ದಿ ಹರಿದಾಡುತ್ತಿದೆ ಅಂದರೆ, ಕಾರ್ತಿಕ್​ ಅವರ ಹುಟ್ಟೂರು ಮೈಸೂರಿನಲ್ಲಿಯೂ ಸಂಭ್ರಮ ಮನೆ ಮಾಡಿದೆ. ಕಾರ್ತಿಕ್​ ಹೆಸರಿಗೆ ಜೈಕಾರಗಳನ್ನು ಕೂಗುತ್ತಿದ್ದಾರೆ. ಕಾರ್ತಿಕ್​ ಅವರ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಆದರೆ, ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನೂ ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

    ಕಾರ್ತಿಕ್​ ಗೆದ್ದಿರುವ ಸಾಧ್ಯತೆಯೂ ಇದೆ. ಏಕೆಂದರೆ, ಅವರಿಗೆ ಅಷ್ಟೊಂದು ಫಾಲೋವರ್ಸ್​ ಇದ್ದಾರೆ. ಬಿಗ್​ಬಾಸ್​ನಲ್ಲಿ ಅವರ ಆಟ ಎಲ್ಲರ ಮನಸ್ಸನ್ನು ಗೆದ್ದಿದೆ. ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದ್ದು, ಈ ಹಿಂದೆ ಟ್ವಿಟರ್​ನಲ್ಲಿ #DESERVINGWINNERKARTHIK ಎಂದು ಟ್ರೆಂಡ್​ ಕೂಡ ಆಗಿತ್ತು. ಹೀಗಾಗಿ ಕಾರ್ತಿಕ್​ ಗೆಲುವನ್ನು ತಳ್ಳಿಹಾಕುವಂತಿಲ್ಲ. ಆದರೆ, ಏನೇ ಸುದ್ದಿ ಹರಿದಾಡಿದರೂ ಅಂತಿಮವಾಗಿ ಟಿವಿ ಪರದೆಯಲ್ಲಿ ನಿರೂಪಕ ಕಿಚ್ಚ ಸುದೀಪ್​ ಘೋಷಣೆ ಮಾಡುವವರೆಗೂ ಎಲ್ಲವೂ ವದಂತಿಯಾಗೇ ಇರಲಿದೆ. ಕಿಚ್ಚನ ಬಾಯಿಂದ ಹೆಸರು ಬಂದ ಬಳಿಕವೇ ಬಿಗ್​ಬಾಸ್​ ಸಿಸನ್​ 10ರ ಕಿರೀಟ ಯಾರಾ ಪಾಲಾಗಿದೆ ಎಂಬುದು ಖಚಿತವಾಗಲಿದೆ. ಈ ಕುತೂಹಲಕ್ಕೇ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ.

    ಗೂಗಲ್​ ಪ್ರಕಾರ ಸಂಗೀತಾ
    ಹೌದು, ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಸಂಗೀತಾ ಶೃಂಗೇರಿ ಮುಡಿಗೇರಲಿದೆಯಂತೆ. ಈ ಮಾತನ್ನು ಸಾರ್ವಜನಿಕರಾಗಲಿ ಅಥವಾ ಎಲಿಮಿನೇಟ್​ ಆಗಿ ಮನೆಯಿಂದ ಹೊರಬಂದಿರುವ ಸ್ಪರ್ಧಿಗಳಾಗಲಿ ಹೇಳುತ್ತಿಲ್ಲ. ಸ್ವತಃ ಗೂಗಲ್​ನಲ್ಲಿ ಸಂಗೀತಾ ಹೆಸರು ಕೇಳಿಬರುತ್ತಿದೆ. ಅದು ಹೇಗೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು ಗೂಗಲ್​ಗೆ ಹೋಗಿ bigg boss kannada season 10 winner ಎಂದು ಸರ್ಚ್​ ಮಾಡಿದರೆ ಮೊದಲು ಬರುವುದು ಸಂಗೀತಾ ಶೃಂಗೇರಿ ಹೆಸರು.

    2024 ಜನವರಿ 27ರಂತೆ ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರ್ಯಾಂಡ್ ಫಿನಾಲೆಯಲ್ಲಿ ಸಂಗೀತಾ ಶೃಂಗೇರಿ ಗೆಲ್ಲುವ ನಿರೀಕ್ಷೆಯಿದೆ ಎಂದು ಗೂಗಲ್​ ಸರ್ಚ್​ನಲ್ಲಿ ತೋರುತ್ತಿದೆ. ವಿಜೇತ ಸ್ಪರ್ಧಿ 50 ಲಕ್ಷ ರೂ. ನಗದು ಮತ್ತು ಒಂದು ಕಾರು ಹಾಗೂ ಟ್ರೋಫಿಯನ್ನು ಬಹುಮಾನವಾಗಿ ಪಡೆಯಲಿದ್ದಾರೆ ಎಂದು ಗೂಗಲ್​ ಸರ್ಚ್​ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

    ನೋ ಸ್ಮೋಕಿಂಗ್​ ಜಾಹೀರಾತು ಬಾಲಕಿ ಈಗ ಹೇಗಿದ್ದಾಳೆ ನೋಡಿ? ಬೋಲ್ಡ್​ ಅವತಾರಕ್ಕೆ ಫಿದಾ ಆಗೋದು ಗ್ಯಾರಂಟಿ

    ಹಾವು-ಮುಂಗುಸಿ ಸದಾ ಕಿತ್ತಾಡುವುದೇಕೆ? ಇಲ್ಲಿದೆ ನೋಡಿ ತಜ್ಞರು ತಿಳಿಸಿದ ಅಸಲಿ ಕಾರಣ…

    ಡ್ರೈವಿಂಗ್​ ಮಾಡುತ್ತಲೇ ನಿದ್ರೆಗೆ ಜಾರಿದ ಚಾಲಕ: ಕ್ಷಣಾರ್ಧದಲ್ಲೇ ಹಾರಿ ಹೋಯ್ತು 6 ಮಂದಿಯ ಪ್ರಾಣ ಪಕ್ಷಿ

    ಫ್ರೀ ಬಸ್ ಪ್ರಯಾಣ: ತೆಲಂಗಾಣದಲ್ಲಿ 45 ದಿನದಲ್ಲಿ 12 ಕೋಟಿ ಮಹಿಳೆಯರು ಸಂಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts