More

    ಫ್ರೀ ಬಸ್ ಪ್ರಯಾಣ: ತೆಲಂಗಾಣದಲ್ಲಿ 45 ದಿನದಲ್ಲಿ 12 ಕೋಟಿ ಮಹಿಳೆಯರು ಸಂಚಾರ!

    ಹೈದರಾಬಾದ್: ಕರ್ನಾಟಕದಂತೆ ತೆಲಂಗಾಣದಲ್ಲೂ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಜಾರಿಗೊಳಿಸಿರುವ ಆ ರಾಜ್ಯದ ಕಾಂಗ್ರೆಸ್​ ಸರ್ಕಾರಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

    ಇದನ್ನೂ ಓದಿ: ಅಕಾಡೆಮಿ ಮ್ಯೂಸಿಯಂ ಗಾಲಾದಲ್ಲಿ ಭಾಗವಹಿಸಿದ ಮೊದಲ ಭಾರತೀಯ ನಟಿ ದೀಪಿಕಾ: ವಿಶೇಷತೆ ಏನು?

    ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಐತಿಹಾಸಿಕ ನಿರ್ಧಾರ ಎಂದು ತೆಲಂಗಾಣ ಆರ್‌ಟಿಸಿ ಎಂಡಿ ವಿಸಿ ಸಜ್ಜನರ್ ಹೇಳಿದ್ದಾರೆ. 45 ದಿನಗಳಲ್ಲಿ 12 ಕೋಟಿಗೂ ಹೆಚ್ಚು ಮಹಿಳೆಯರು ಆರ್ ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ನಾಂಪಲ್ಲಿಯಲ್ಲಿನ ತೆಲುಗು ವಿಶ್ವವಿದ್ಯಾನಿಲಯದಲ್ಲಿ ಅಂಧ ನೌಕರರ ಸಂಘ ಆಯೋಜಿಸಿದ್ದ ಡಾ.ಲೂಯಿಸ್ ಬ್ರೈಲ್ ಅವರ 215ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

    ಉಚಿತ ಪ್ರಯಾಣದಿಂದಾಗಿ ಅಂಗವಿಕಲರಿಗೆ ಮೀಸಲಿಟ್ಟ ಆಸನಗಳಲ್ಲಿಯೂ ಮಹಿಳೆಯರು ಕುಳಿತುಕೊಳ್ಳುತ್ತಿದ್ದಾರೆ. ಆರ್ ಟಿಸಿ ಬಸ್ ಗಳಲ್ಲಿ ಅಂಗವಿಕಲರು ಅನುಭವಿಸುತ್ತಿರುವ ತೊಂದರೆ ನನ್ನ ಗಮನಕ್ಕೆ ಬಂದಿತ್ತು. ನಾವು ಶೀಘ್ರದಲ್ಲೇ 2,375 ಹೊಸ ಬಸ್‌ಗಳನ್ನು ಪಡೆಯುತ್ತೇವೆ. ಆಗ ಸ್ವಲ್ಪ ಸಮಾಧಾನ ಸಿಗುತ್ತದೆ. ಅಗತ್ಯವಿದ್ದರೆ, ಆರ್‌ಟಿಸಿ ಆಡಳಿತವು ವಿಕಲಚೇತನರಿಗಾಗಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲು ಪರಿಗಣಿಸಿ ನಿರ್ಧರಿಸುತ್ತದೆ. ನಾವು ಅಂಧರಿಗೆ ಪ್ರಕಟಣೆ ಮತ್ತು ವಿಚಾರಣೆ ಕೊಠಡಿ ಉದ್ಯೋಗಗಳಲ್ಲಿ ಅವಕಾಶವನ್ನು ಒದಗಿಸುತ್ತೇವೆ ಎಂದು ಸಜ್ಜನರ್ ಭರವಸೆ ನೀಡಿದರು.

    ‘ನಿಜ, ನನಗೆ ಆಗ ನೋವಾಯಿತು..ಈಗ ನಾನು ಏನನ್ನೂ ಹೇಳುವುದಿಲ್ಲ’: ಶ್ರದ್ಧಾ ದಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts