ಬೆಂಗಳೂರು: ಈಗ ಚಳಿಗಾಲ. ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಒಂದರ ಮೇಲೊಂದು ಬಟ್ಟೆಯನ್ನು ಧರಿಸಿ, ಬೆಚ್ಚಗಿರುವ ಜನರು, ಬಿಸಿ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಚಳಿಯಿಂದ ದೂರ ಸರಿಯಲು ಬಯಸುತ್ತಾರೆ. ಒಂದು ನಿಮಿಷ ಮನೆಯಿಂದ ಅಥವಾ ಕಚೇರಿಯಿಂದ ಹೊರ ಬಂದರೆ, ಚಳಿಗೆ ಮೈ ಮಂಜುಗಡ್ಡೆಯಂತೆ ಆಗುವುದನ್ನು ಕೆಲವರು ತಡೆಯಲಾರರು. ಹೀಗಾಗಿ ಕ್ಷಣಮಾತ್ರದಲ್ಲಿ ಬಿಸಿ ಬಿಸಿ ನೀರನ್ನು ಕೊಡುವ ಗೀಸರ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ಇಂದು ಗೀಸರ್ ಬಳಕೆಯಲ್ಲಿದೆ. 2ರಿಂದ 3 ನಿಮಿಷದಲ್ಲಿ ಮೈಸುಡುವ ನೀರು ಕೊಡುವ ಗೀಸರ್ ನಮ್ಮ ಜೀವಕ್ಕೆ ಎಂತಹ ಆಪತ್ತು ತರುತ್ತದೆ ಎಂಬ ಊಹೆ ನಿಮಗಿದೆಯೇ?
ಇದನ್ನೂ ಓದಿ: ಸಮುದ್ರ ತೀರದಲ್ಲಿ ಯೋಗ ಮಾಡುತ್ತಿದ್ದ ನಟಿ ಅಲೆಗೆ ಬಲಿ! Kamilla Belyatskaya ಬೀಚ್ನಲ್ಲಿ ಕೊಚ್ಚಿ ಹೋದ ವಿಡಿಯೋ ನೋಡಿ
ಮಿಸ್ಟೇಕ್ಗಳನ್ನು ಈಗಲೇ ಸರಿಪಡಿಸಿಕೊಳ್ಳಿ
ಈಗ ಚಳಿಗಾಲವಾಗಿರುವುದರಿಂದ ಹಲವರು ಗೀಸರ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಇದನ್ನು ಹೇಗೆ ಬಳಸುವುದು, ಬಳಸಬೇಕು ಎಂಬ ಗೊಂದಲದಲ್ಲಿ ಅನೇಕರಿದ್ದಾರೆ. ಇದನ್ನು ಹೇಗೆ ಬಳಸಬೇಕೆಂದು ನಿಮಗೆ ಸರಿಯಾಗಿ ತಿಳಿದಿಲ್ಲದಿದ್ದರೆ, ಖಂಡಿತ ಇದು ನಿಮ್ಮ ಜೀವಕ್ಕೆ ಕುತ್ತು ತರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಮಿಸ್ಟೇಕ್ಗಳನ್ನು ಈಗಲೇ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಅವು ಸ್ಫೋಟಗೊಳ್ಳುವ ಸಾಧ್ಯತೆಗಳು ಅಧಿಕ.
ಗೀಸರ್ನಿಂದಾಗಿ ಸಾವು ಕಂಡವರ ಪ್ರಕರಣಗಳೂ ಕಡಿಮೆಯೇನಿಲ್ಲ. ಇತ್ತೀಚೆಗಷ್ಟೇ ಮದುವೆಯಾದ ಯುವತಿಯೊಬ್ಬಳು ಕೂಡ ಇದೇ ರೀತಿಯ ಗೀಸರ್ ಆನ್ ಮಾಡಲು ಹೋಗಿ ಸಾವನ್ನಪ್ಪಿದ್ದಾಳೆ. ಆದ್ದರಿಂದ ಗೀಸರ್ ಅನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಅಷ್ಟಕ್ಕೂ ಈ ವಿಷಯದಲ್ಲಿ ನಾವು ಮಾಡುವ ತಪ್ಪುಗಳೇನು? ಗೀಸರ್ ಬಳಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಉತ್ತಮ? ಎಂಬುದರ ವಿವರ ಹೀಗಿದೆ ಗಮನಿಸಿ.
ಗೀಸರ್ ಸ್ಫೋಟಕ್ಕೆ ಕಾರಣ
ಸಾಮಾನ್ಯವಾಗಿ ಗೀಸರ್ ಬಳಸುವ ಬಹುತೇಕರು ಮಾಡುವ ದೊಡ್ಡ ತಪ್ಪು ದಿನವಿಡೀ ಗೀಸರ್ ಆನ್ ಮಾಡಿಬಿಡುವುದು. ಸ್ನಾನಕ್ಕೆ ಹೋಗಿಬಂದ ಬಳಿಕ ಗೀಸರ್ ಸ್ವಿಚ್ ಅನ್ನು ಆಫ್ ಮಾಡಲು ಮರೆತುಬಿಡುವುದು. ಹೀಗೆ ಮಾಡುವುದರಿಂದ ಯಂತ್ರ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಜತೆಗೆ ತಾಪಮಾನದ ಸೆಟ್ಟಿಂಗ್ನಲ್ಲಿ ಜಾಸ್ತಿ ಇಟ್ಟು, ನೀರಿಗಾಗಿ ಕಾಯುವುದು. ಅತಿಯಾದ ತಾಪನವು ಗೀಸರ್ ಸ್ಫೋಟಕ್ಕೆ ಕಾರಣವಾಗುತ್ತದೆ. ಸ್ವಿಚ್ ತುಂಬಾ ಹೊತ್ತು ಆನ್ ಆಗಿದ್ದರೂ ಗೀಸರ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಬಳಕೆಯಲ್ಲಿದ್ದಾಗ ಅದರಿಂದ ಯಾವುದಾದರೂ ಶಬ್ದ ಹೊರಬಂದರೆ, ಗೀಸರ್ ರಿಪೇರಿಗೆ ಬಂದಿದೆ ಎಂಬುದು ಸೂಚನೆ.
2 ವರ್ಷಕ್ಕೊಮ್ಮೆ
ಆದಾಗ್ಯೂ ನೀವು ಗೀಸರ್ ಅನ್ನು ಬಳಸುತ್ತಿದ್ದರೆ ಅದು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ತಕ್ಷಣವೇ ಎಲೆಕ್ಟ್ರಿಷಿಯನ್ ಕರೆಸಿ, ಗೀಸರ್ ಸರಿಪಡಿಸಿಕೊಳ್ಳಿ. ಅನೇಕರು 10 ಅಥವಾ 15 ವರ್ಷಗಳ ಕಾಲ ಗೀಸರ್ ಅನ್ನು ಸ್ವಚ್ಛಗೊಳಿಸದೆಯೇ ತಡೆರಹಿತವಾಗಿ ಬಳಸುತ್ತಾರೆ. ಹೀಗೆ ಬಳಸುವುದರಿಂದ ಗೀಸರ್ ಒಳಗೆ ಸಂಗ್ರಹವಾಗುವ ತ್ಯಾಜ್ಯ ಯಂತ್ರವನ್ನು ಹಾಳು ಮಾಡುತ್ತದೆ. ಅದಕ್ಕಾಗಿಯೇ 2 ವರ್ಷಕ್ಕೊಮ್ಮೆಯಾದರೂ ಗೀಸರ್ ಸ್ವಚ್ಛಗೊಳಿಸುವುದು ಒಳಿತು. ಶುಚಿಗೊಳಿಸದೆ ವರ್ಷಗಳ ಬಳಕೆಯು ಚರ್ಮ, ಕೂದಲು ಉದುರುವುದು ಮತ್ತು ಅಲರ್ಜಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಎಲ್ಲಾ ಕಾರಣಗಳಿಂದ ಗೀಸರ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಅಗತ್ಯ. ಸ್ನಾನಗೃಹದಲ್ಲಿ ಗೀಸರ್ ಅನ್ನು ಸರಿಯಾದ ಸ್ಥಳದಲ್ಲಿ ಇಡಬೇಕು. ಅಪಘಾತ ಸಂಭವಿಸದಂತೆ ಎಚ್ಚರ ವಹಿಸುವುದು ಒಳಿತು,(ಏಜೆನ್ಸೀಸ್).