ಐಪಿಎಲ್​ ಭಾಗ-2ಕ್ಕೆ ಆಗಮಿಸದಿದ್ದರೆ ವಿದೇಶಿ ಆಟಗಾರರಿಗೆ ಕಾದಿದೆ ಶಾಕ್​..!

pat cummins for web
Published on

ನವದೆಹಲಿ: ಭಾರತದಲ್ಲಿ ಕೋವಿಡ್​-19 ಅಬ್ಬರಿಸುತ್ತಿರುವುದರಿಂದ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) 14ನೇ ಐಪಿಎಲ್​ನ ಉಳಿದ 31 ಪಂದ್ಯಗಳಿಗೆ ಮುರ್ಹೂತ ಫಿಕ್ಸ್​ ಮಾಡಿದೆ. ಭಾರತದಲ್ಲಿ ಟೂನಿರ್ಯನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ನಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಆದರೆ, ಲೀಗ್​ ನಡೆಯುವ ಕುರಿತು ಬಿಸಿಸಿಐ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಕೆಲ ವಿದೇಶಿ ಆಟಗಾರರು ಲೀಗ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದೇ ವೇಳೆ ದ್ವಿಪಕ್ಷೀಯ ಸರಣಿಗಳು ಆಯೋಜನೆಗೊಂಡಿರುವುದೇ ಇದಕ್ಕೆ ಕಾರಣ. ಲೀಗ್​ನ ಉಳಿದ ಪಂದ್ಯಗಳಲ್ಲಿ ಆಡದ ವಿದೇಶಿ ಆಟಗಾರರಿಗೆ ಕೇವಲ ಅರ್ಧ ಸಂಭಾವನೆ ನೀಡಲು ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಕೋಲ್ಕತ ನೈಟ್​ ರೈಡರ್ಸ್​ ತಂಡದ ವೇಗಿ ಪ್ಯಾಟ್​ ಕಮ್ಮಿನ್ಸ್​ 15.5 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದು, ಲೀಗ್​ನಿಂದ ಹೊರಗುಳಿದರೆ ಕೇವಲ 7.75 ಕೋಟಿ ರೂ.ಅಷ್ಟೆ ಪಡೆಯಲಿದ್ದಾರೆ. ಇದೇ ರೀತಿ ದೊಡ್ಡ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿರುವ ಆಟಗಾರರು ಭಾರಿ ನಷ್ಟ ಅನುಭವಿಸಲಿದ್ದಾರೆ. ಆದರೆ, ಲೀಗ್​ಗಿಂತ ದೇಶದ ತಂಡ ಮುಖ್ಯ. ಹೀಗಾಗಿ ಲೀಗ್​ನಿಂದ ಹಿಂದೆ ಸರಿಯುವುದು ಅನಿವಾರ್ಯವಾಗಿದೆ.

ಈಗಾಗಲೇ ಇಂಗ್ಲೆಂಡ್​ ಕ್ರಿಕೆಟ್​ ಮಂಡಲಿ, ಐಪಿಎಲ್​ನಲ್ಲಿ ಇಂಗ್ಲೆಂಡ್​ ಆಟಗಾರರು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿ ಕೂಡ ಇದೇ ನಿಯಮ ಅನುಸರಿಸುವ ಸಾಧ್ಯತೆಗಳಿವೆ. ಬೆನ್​ ಸ್ಟೋಕ್ಸ್​, ಜೇಲ್​ ರಿಚರ್ಡ್​ಸನ್​, ಕೈಲ್​ ಜೇಮಿಸನ್​, ಗ್ಲೆನ್​ ಮ್ಯಾಕ್ಸ್​ವೆಲ್​, ಡೇವಿಡ್​ ವಾರ್ನರ್​, ಪ್ಯಾಟ್​ ಕಮ್ಮಿನ್ಸ್​, ರಶೀದ್​ ಖಾನ್​ ದುಬಾರಿ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿರುವ ಆಟಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net