BBKS10: ಮುರಿದು ಬಿತ್ತಾ ಮೈಕಲ್-ಇಶಾನಿ ಲವ್‌ ಸ್ಟೋರಿ!; ಕಿಚ್ಚನ ಪಂಚಾಯ್ತಿಯಲ್ಲಿ ಪರಿಹಾರ?

Untitled design - 2023-11-04T213132.444
Published on

ಬೆಂಗಳೂರು: ಮೊದಲನೇ ವಾರದಿಂದಲೂ ಇಶಾನಿ ಮತ್ತು ಮೈಕಲ್‌ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗುತ್ತಿತ್ತು. ಇಬ್ಬರೂ ತಮ್ಮ ಬದುಕಿನ ಬಗ್ಗೆ, ಕನಸುಗಳ ಬಗ್ಗೆ, ಪರಸ್ಪರರ ವ್ಯಕ್ತಿತ್ವಗಳ ಬಗ್ಗೆ ಹಲವು ಬಾರಿ ಮುಕ್ತವಾಗಿ ಮಾತಾಡಿದ್ದರು. ಕಾರ್ತಿಕ್-ಸಂಗೀತಾ ಮತ್ತು ನಮ್ರತಾ-ಸ್ನೇಹಿತ್ ಜತೆಗೆ ಇಶಾನಿ-ಮೈಕಲ್ ಜೋಡಿ ಕೂಡ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ಗಮನಸೆಳೆದಿತ್ತು. ಆದರೆ, ಭಿನ್ನ ಹಿನ್ನಲೆಗಳಿಂದ ಬಂದು ಬಿಗ್‌ಬಾಸ್ ಮನೆಯಲ್ಲಿ ಒಂದಾಗಿದ್ದ ಈ ಜೋಡಿಯ ಪ್ರೇಮ ಮುರಿದುಬಿತ್ತು ಎನ್ನುವಂತಾಗಿದೆ.

ಆದದ್ದಿಷ್ಟೆ! ಆಗಷ್ಟೇ ಸಂಗೀತಾ ಜೈಲಿನೊಳಗೆ ಹೋಗಿದ್ದರು. ಅದೇ ಬೇಸರದಲ್ಲಿ ಕಾರ್ತಿಕ್ ಮತ್ತು ಇಶಾನಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿರುವ ಇಶಾನಿ ಮಾತನಾಡುತ್ತ ಕಾರ್ತಿಕ್ ಅವರನ್ನು ಕೆಣಕಿದ್ದಾರೆ. ‘ಪಪೆಟ್‌’ ಎಂದು ಕಾರ್ತಿಕ್​ ಕರೆದಿದ್ದಾರೆ. ಇದರಿಂದ ಕೋಪ ಮಾಡಿಕೊಂಡ ಕಾರ್ತಿಕ್, ‘ನನ್ ಫ್ರೆಂಡ್ ಅವಳು, ಅವಳೇನೂ ತಪ್ಪು ಮಾಡಿಲ್ಲ. ಅವಳನ್ನು ಡಿಫೆಂಡ್ ಮಾಡುವ ಜವಾಬ್ದಾರಿ ನಂದು. ಅದ್ಯಾವನೇ ಬರ್ಲಿ ನಾನು ಮಾಡೇ ಮಾಡ್ತೀನಿ’ ಎಂದು ಏರಿದ ಧ್ವನಿಯಲ್ಲಿಯೇ ಹೇಳಿದರು.

‘ಸೋತಾಗ ಮುಖ ಗಂಟು ಹಾಕಿಕೊಂಡು ಓಡಾಡೋದು. ಮಾರನೇ ದಿನ ಬಂದು ಸಾರಿ ಅನ್ನೋದೆಲ್ಲ ವ್ಯಕ್ತಿತ್ವದ ಬದಲಾವಣೆ ಅಲ್ಲ. ಒಬ್ಬ ತನ್ನ ಫ್ರೆಂಡ್‌ನ ಡಿಫೆಂಡ್ ಮಾಡ್ಕೊಂಡ್ರೆ ಅದು ನಿನ್ ಪ್ರಕಾರ ವ್ಯಕ್ತಿತ್ವದ ಚೇಂಜ್ ಅಲ್ವಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಇಶಾನಿ, ‘ನಾನು ಯಾವತ್ತೂ ಹಾಗೆಲ್ಲ ಮಾಡಿಲ್ಲ. ನೀವು ಆಗಲೇ ಗುಂಪು ಮಾಡಿಕೊಂಡಿದ್ದೀರಾ’ ಎಂದಿದ್ದಾರೆ. ಅಷ್ಟರಲ್ಲಿ ಗಲಾಟೆ ಕೇಳಿ ಅಲ್ಲಿಗೆ ಮೈಕಲ್ ಕೂಡ ಬಂದರು. ಇವರಿಬ್ಬರ ಜಗಳವನ್ನು ಗಂಭೀರವಾಗಿ ಆಲಿಸಿದ ಮೈಕಲ್​ ಏನೂ ಮಾತನಾಡದೆ ಮೌನವಾಗಿ ಕುಳಿತ್ತಿದ್ದರು. ಕಾರ್ತಿಕ್​-ಇಶಾನಿ ಮಧ್ಯೆ ನಡೆದ ಜಗಳದ ಬಳಿಕ ಮೈಕಲ್​-ಇಶಾನಿ ನಡುವೆ ಮನಸ್ತಾಪ ಸ್ಪೋಟಗೊಂಡಿತು.

ಕಾರ್ತಿಕ್​ನ ಪ್ರಶ್ನೆ ಮಾಡದೆ ಅವರ ಪರ ಹೇಳ್ತಿಯಾ? ನೀನು ಒಬ್ಬ ಬಾಯ್​ಫ್ರೆಂಡೂ ಎಂದು ಕಣ್ಣೀರಿಟ್ಟರು. ತಾಳ್ಮೆ ಕಳೆದುಕೊಂಡ ಮೈಕಲ್​ ಇಶಾನಿಗೆ ಸೈಕೋ ಎಂಬ ಪದವನ್ನು ಬಳಸಿದರು. ಇದರಿಂದ ಮತ್ತಷ್ಟು ಕುಗ್ಗಿದ ಇಶಾನಿ, ಮನೆಯವರೊಂದಿಗೆ ಅಳುತ್ತ ಕುಳಿತ್ತಿದ್ದರು.‘ಬಳೆಗಳ’ ಬಗ್ಗೆ ಮಾತಾಡಿದ ವಿನಯ್‌ಗೆ ಕಿಚ್ಚನ ‘ಪಂಚಾಯ್ತಿ’ಯಲ್ಲಿ ಸಖತ್ ಕ್ಲಾಸ್‌ ತೆಗೆದುಕೊಂಡಿರುವುದು ಪ್ರೋಮೊದಲ್ಲಿ ಈಗಾಗಲೇ ಬಹಿರಂಗವಾಗಿದೆ.

ಆದರೆ ತಣ್ಣಗೆ ಮುರಿದುಬಿದ್ದಿರುವ ಇಶಾನಿ-ಮೈಕಲ್ ಪ್ರೇಮವನ್ನು ಸುದೀಪ್​ ಸರಿಪಡಿಸುತ್ತಾರಾ? ಅವರ ನಡುವಿನ ಗೊಂದಲಕ್ಕೆ ಕಿಚ್ಚನ ಪ್ರತಿಕ್ರಿಯೆ ಏನಿರಬಹುದು? ಎಂಬುದನ್ನು ಇಂದಿನ ವಾರದ ಕಥೆ ಸುದೀಪ್​ ಜತೆ ಸಂಚಿಕೆಯಲ್ಲಿ ನೋಡಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net