BBKS10: ಸಂಗೀತಾ-ವಿನಯ್​ ನಡುವೆ 'ಯೋಗ್ಯತೆ'ಯ ಕಾಡ್ಗಿಚ್ಚು

Untitled design - 2023-11-01T202433.764
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಅದ್ದೂರಿ ಲಾಂಚ್​ ಪಡೆದು ಇಂದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಮನೆಯಲ್ಲಿ ಹಳ್ಳಿ ಸೊಗಡು, ಸಂಪ್ರದಾಯದಂತೆ ಹೊಸ ಟಾಸ್ಕ್​ಗೆ ಸಿದ್ಧಗೊಂಡ ಬಿಗ್​ ಸ್ಪರ್ಧಿಗಳು ಇದೀಗ ಮಾತಿನ ಸಮರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ಪರ್ಧಿಗಳ ನಡುವೆ ಇರಬೇಕಿದ್ದ ಮಾತಿನ ಚೌಕಟ್ಟು ಮೀರಿ ಹೋಗಿದೆ!

ಟಾಸ್ಕ್​ ಮಧ್ಯೆ ಸಣ್ಣದಾಗಿ ಶುರುವಾದ ಜಟಾಪಟಿಯಲ್ಲಿ ಸಂಗೀತಾ ಮತ್ತು ವಿನಯ್​ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ತದನಂತರದಲ್ಲಿ ಮಾತಿನ ದಾಟಿ ಬದಲಾಗಿದ್ದು, ಇಬ್ಬರು ತಮ್ಮ ತಮ್ಮ ಯೋಗ್ಯತೆ ಬಗ್ಗೆ ಏರುಧ್ವನಿಯಲ್ಲಿ ವಾಗ್ವಾದ ನಡೆಸಿದ್ದಾರೆ. ಕಿಲಾಡಿ, ಡಾನ್​, ಯೋಗ್ಯತೆ, ಬಳೆ, ಅನ್ಯಾಯ, ನೋಡ್ತೀನಿ ಎಂಬ ಪದಗಳು ಸಂಗೀತಾ-ವಿನಯ್​ ನಡುವೆ ಸ್ಪೋಟಗೊಂಡ ಜಗಳಕ್ಕೆ ಕಾರಣವಾದ ಪ್ರಮುಖ ಪದಗಳು.

ಇವರಿಬ್ಬರ ಮಾತಿನ ಸಮರ ಇಲ್ಲಿಗೆ ಮುಗಿಯಿತೇ ಅಥವಾ ಟಾಸ್ಕ್​ ಅಂತ್ಯದವರೆಗೂ ಕೊಂಡ್ಯೊದರಾ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net