BBKS10: ಸಂಗೀತಾ ಫ್ಯಾನ್ಸ್​ಗೆ ಪವಿ ಕೊಟ್ಟ ಕೌಂಟರ್ ಇದು!​ ಇಲ್ಲಿದೆ ನೋಡಿ ವಿಡಿಯೋ

WhatsApp Image 2023-12-22 at 10.13.16 PM
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10 ಇದೀಗ 11ನೇ ವಾರದ ಅಂತ್ಯದತ್ತ ಸಾಗುತ್ತಿದ್ದು, 10ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಪವಿ ಪೂವಪ್ಪ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮನೆಯೊಳಗಿನ ಹಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಈ ವೇಳೆ ಸಂಗೀತಾ ಶೃಂಗೇರಿ ಫ್ಯಾನ್ಸ್​ಗೆ ಖಡಕ್ ಕೌಂಟರ್​ ಕೊಟ್ಟಿದ್ದು, ಅವರ ಹೇಳಿದ ಮಾತುಗಳು ಹೀಗಿವೆ.

"ನನಗೆ ಬಿಗ್ ಬಾಸ್​ ಆಫರ್​ ಕಳೆದ ಐದು ವರ್ಷಗಳಿಂದಲೂ ಬರುತ್ತಿದೆ. ಲಾಸ್ಟ್​ ಒಟಿಟಿ ಬಂದಾಗಲೂ ಬಂದಿತ್ತು. ಈ ಸೀಸನ್​ ಮೊದಲು ಕೂಡ ಬಂದಿತ್ತು. ಆದ್ರೆ, ನಾನೇ ಹೋಗೋದು ಬೇಡ ಅಂತಾನೆ ಇದ್ದೇ, ಯಾಕಂದ್ರೆ ಹೇಗೆ ಮನೆಯೊಳಗೆ ಹೊಂದಿಕೊಳ್ಳುವುದು? ಇರಲು ಸಾಧ್ಯನಾ? ಎಂಬ ಭಯ ಕಾಡಿತ್ತು. ಚಾನೆಲ್ ಕಡೆಯಿಂದ ಆಫರ್​ ಬಂದ ಬಳಿಕ ವೈಲ್ಡ್​ಕಾರ್ಡ್​ ಎಂಟ್ರಿಯಾಗಿ ಮನೆಗೆ ಪ್ರವೇಶಿಸಿದೆ" ಎಂದು ಪವಿ ಹೇಳಿದರು.

ಇನ್ನು ನೆಗಟಿವ್ ಕಮೆಂಟ್ಸ್​ ಕುರಿತಾಗಿ ಮಾತನಾಡಿದ ಪವಿ ಪೂವಪ್ಪ, "ನನಗೆ ವೋಟ್​ ಮಾಡಿರುವವರಿಗೆ ಮತ್ತು ಮಾಡದೆ ಇದ್ದವರಿಗೂ ಧನ್ಯವಾದ ಹೇಳ್ತೀನಿ. ತುಂಬಾ ನೆಗಟಿವ್ ಕಮೆಂಟ್​ ಕೂಡ ಹಾಕಿದ್ದೀರಾ! ಹಾಕ್ರಿ, ಚೆನ್ನಾಗಿ ದುಡ್ಡು ಮಾಡ್ಕೊಳ್ಳಿ ಅಂತ ಹೇಳ್ತೀನಿ. ನನಗೆ ಕೆಲವರು ವಿನಯ್​ ಗ್ರೂಪ್​ಗೆ ಸೇರಿದ್ದೀರಾ, ವಿನಯ್ ಚಮಚ ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ರು, ಅದನ್ನು ನೋಡ್ದೆ, ಆ ಮೇಲೆ ಸಂಗೀತಾ ಫ್ಯಾನ್​ ಪೇಜ್​ ಅಲ್ಲ......." ಮತ್ತಷ್ಟು ವಿಚಾರಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ, ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net