

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಟಾಸ್ಕ್ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಗ್ಬಾಸ್ ಆರಂಭವಾದಾಗಿನಿಂದಲೂ ವಿನಯ್ ಗೌಡ ಹಾಗೂ ಮನೆಯಲ್ಲಿರುವ ಕೆಲವು ಸ್ಫರ್ಧಿಗಳ ನಡುವಿನ ಗಲಾಟೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರ ಹಲವು ಬಾರಿ ಚರ್ಚೆಗೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಬಿಗ್ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದರು ಬಂದಿದ್ದಾರೆ. ಅದರಂತೆ ವಿನಯ್ ಪತ್ನಿ ಅಕ್ಷತಾ ಕೂಡ ಬಿಗ್ಬಾಸ್ ಮನೆಗೆ ಬಂದಿದ್ದಾರೆ.
ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಬಿಗ್ಬಾಸ್ ಮನೆಗೆ ಮೊದಲು ಬರುವ ಅಕ್ಷತಾ ವಿನಯ್ ಜೊತೆ ಮಾತನಾಡಿ ಆ ನಂತರ ನೇರ ಸಂಗೀತಾ ಅವರತ್ತ ತೆರಳಿ ನಿಮ್ಮ ಜೊತೆ ಮಾತಾಡಬೇಕು ಎಂದು ಹೇಳಿದ್ದಾರೆ. ಬಳಿಕ ಪ್ರತ್ಯೇಕವಾಗಿ ಅವರಿಬ್ಬರು ಮಾತುಕತೆ ನಡೆಸಿದ್ದಾರೆ. ಅವರಿಬ್ಬರು ಮಾತನಾಡುವಾಗ ದೂರದಲ್ಲೇ ವಿನಯ್ ಕುಳಿತುಕೊಂಡಿರುವ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.
ಇತ್ತ ಪ್ರೋಮೋ ನೋಡಿರುವ ನೆಟ್ಟಿಗರು ವಿನಯ್ ಪತನಿ ಅಕ್ಷತಾ ಹಾಗೂ ಸಂಗೀತಾ ನಡುವಿನ ಮಾತುಕತೆಯನ್ನು ಇನ್ನೇನು ಆಗೋದು ಇದೆ ಗುರು ಎಂದು ತರಹೇವಾರಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಇತ್ತ ಹಲವರು ಇವರಿಬ್ಬರ ನಡುವೆ ಏನೆಲ್ಲಾ ಆಗಬಹುದು ಎಂದು ಹಲವರು ಇಂದಿನ ಸಂಚಿಕೆ ಪ್ರಸಾರ ಆಗುವುದನ್ನೇ ಕಾಯುತ್ತಿದ್ದಾರೆ.