ಸಿನಿಮಾ

ಇದು ರಿವರ್ಸ್ ಗೇರ್ ಸರ್ಕಾರ; ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಇದು ರಿವರ್ಸ್ ಗೇರ್ ಸರ್ಕಾರ. ನಾವು ಮಾಡಿದ ಜನಪರ ಕಾನೂನಿನಲ್ಲಿ ರೀವರ್ಸ್ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಕೂಡಲೇ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ”ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡ್ತಾರೆ ಅನ್ನೋದು ಗೊತ್ತಿದೆ. ಅವರ ಅಧಿಕಾರ ಇದೆ ಏನು ಮಾಡ್ತಾರೆ ನೋಡೋಣ. ಆದರೆ ಸಾರ್ವತ್ರಿಕವಾಗಿ ಜನ ಸಮುದಾಯಕ್ಕೆ ಅನ್ಯಾಯ ಆದರೆ ನಾವು ಹೋರಾಟ ಮಾಡುತ್ತೇವೆ. ಕಾನೂನಾತ್ಮಕವಾಗಿ, ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ” ಎನ್ನುವ ಎಚ್ಚರಿಕೆಯನ್ನು ಕಾಂಗ್ರೆಸ್​​ಗೆ ನೀಡಿದ್ದಾರೆ.

ಇದನ್ನೂ ಓದಿ: ಈ ನಾಲ್ಕು ಹೈಪ್ರೋಫೈಲ್ ಪ್ರಕರಣಗಳಿಗೆ ಮತ್ತೆ ಜೀವ ಬರುತ್ತಾ? ಅಧಿಕಾರಿಗಳೊಂದಿಗೆ ಇಂದು ಡಿಜಿಪಿ ಸಭೆ

“ಅಧಿಕಾರ ಬಂದಾಗ ಸ್ವೇಚ್ವಾಚಾರವಾಗಿ ಎಲ್ಲವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದು ದುರಹಂಕಾರವಾಗಿದೆ. ಇದು ರಿವರ್ಸ್ ಗೇರ್ ಸರ್ಕಾರ. ಅವರ ಗ್ಯಾರಂಟಿಯಲ್ಲೂ ರೀವರ್ಸ್ ಹೋಗುತ್ತಿದ್ದಾರೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರೀವರ್ಸ್ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಕೂಡಲೇ ಗೊತ್ತಾಗಲಿದೆ ಇಷ್ಟು ಬೇಗ ಸರ್ಕಾರ ಸೇಡಿನ ಕ್ರಮ ಆಗುತ್ತಿದೆ. ರೀವರ್ಸ್ ಗೇರ್ ಸರ್ಕಾರ ಅಷ್ಟೇ ಅಲ್ಲ ಇದು ಸೇಡಿನ ಕ್ರಮ‌ ಮಾಡುತ್ತಿದ್ದೆ ” ಎಂದು ಕಿಡಿಕಾರಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣ | KSRTC ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಿಂದ ಸಿಎಂಗೆ ಪತ್ರ

Latest Posts

ಲೈಫ್‌ಸ್ಟೈಲ್