ಬ್ಯಾಂಕ್​ಗಳು ನನ್ನಿಂದ ಎರಡು ಪಟ್ಟು ವಸೂಲಿ ಮಾಡಿವೆ; ಅದರೂ ನಾನು ಅಪರಾಧಿ: ವಿಜಯ್​ ಮಲ್ಯ ಶಾಕಿಂಗ್​ ಕಾಮೆಂಟ್​! | Vijay Mallya

dk (24)
Published on

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಾಸಭೆಯಲ್ಲಿ ನೀಡಿದ್ದ ಹೇಳಿಕೆ ವಿರುದ್ದ ಉದ್ಯಮಿ ವಿಜಯ್​ ಮಲ್ಯ(Vijay Mallya) ಕಾಮೆಂಟ್​ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಪಡಿಸಿದ್ದಾರೆ.

ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್​ ಮಲ್ಯ ಅವರಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮೂಲಕ(ಪಿಎಸ್​ಬಿ) 14,131 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಲೋಕಾಸಭೆಗೆ ನಿರ್ಮಲಾ ಸೀತಾರಾಮನ್​ ಮಂಗಳವಾರ ತಿಳಿಸಿದ್ದರು.

ಈ ಕುರಿತು ತನ್ನ ಎಕ್ಸ್​ ಖಾತೆಯಲ್ಲಿ ವಿಜಯ್​ ಮಲ್ಯ ಪ್ರತಿಕ್ರಿಯಿಸಿದ್ದು, 6,203 ಕೋಟಿ ರೂ. ಸಾಲದ ಇರುವುದಾಗಿ ಕೋರ್ಟ್​ ತೀರ್ಪು ಕೊಟ್ಟಿದೆ. ಆದರೆ, ಭಾರತದಲ್ಲಿ ನನ್ನ ಆಸ್ತಿಯ ಮೂಲಕ 14,131 ಕೋಟಿ ರೂ.ವಸೂಲಿ ಮಾಡಿದ್ದಾರೆ. ಇದು ಎರಡು ಪಟ್ಟು ಅಲ್ವವೇ?. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಬ್ಯಾಂಕ್​ ಹೇಗೆ ಅಷ್ಟೋಂದು ವಸೂಲಿ ಮಾಡಿವೆ. ಅಲ್ಲದೇ ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶ ಇದಿಯೇ ಎಂದು ಪ್ರಶ್ನಿಸಿದ್ದಾರೆ.

''ತೀರ್ಪಿನ ಋಣಭಾರಕ್ಕಿಂತ ಎರಡು ಪಟ್ಟು ಹೆಚ್ಚು ವಸೂಲಿ ಮಾಡಿದರೂ ನಾನು 'ಅರ್ಥಿಕ ಅಪರಾಧಿ'(economic offender) ಎಂದು ಹಣೆ ಪಟ್ಟಿ ಕಟ್ಟಲಾಗಿದೆ. ಇಡಿ ಮತ್ತು ಬ್ಯಾಂಕ್​ಗಳು ಈ ಪ್ರಕ್ರಿಯೆಯನ್ನು ಕಾನೂನನ್ನು ಸಮರ್ಥಿಸದಿದ್ದರೆ ನಾನು ಪರಿಹಾರಕ್ಕೆ ಆರ್ಹನಾಗಿದ್ದೇನೆ'' ಎಂದು ಹೇಳಿದ್ದಾರೆ.

ಕಿಂಗ್​ಫಿಷರ್​ ಏರ್​ಲೈನ್ಸ್​ಗೆ ಸಂಬಂಧಿಸಿದಂತೆ ಸಾಲಗಳನ್ನು ಮರು ಪಾವತಿಸಲಾಗದೆ ಮತ್ತು ಹಣಕಾಸಿನಲ್ಲಿ ಆಕ್ರಮ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ 2016ರಲ್ಲಿ ದೇಶದಿಂದ ಪಲಾಯನ ಮಾಡಿದ್ದರು,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net