

ಹೈದರಾಬಾದ್: ಸೌದಿ ಅರೇಬಿಯಾದಲ್ಲಿ(Saudi Arabia) ನನ್ನ ಮಗ ಬಲವಂತವಾಗಿ ಜಮೀನು ಕೆಲಸ ಮಾಡುವುದರ ಜತೆ ಕುರಿ ಕಾಯುತ್ತಿದ್ದಾನೆ. ಹೀಗಾಗಿ, ಅವನನ್ನು ಕೂಡಲೇ ಭಾರತಕ್ಕೆ ಕರೆ ತರುವಂತೆ ಅಥವಾ ರಕ್ಷಿಸುವಂತೆ ತೆಲಂಗಾಣ ಸಿಎಂ ರೇವಂತರೆಡ್ಡಿ ಅವರಿಗೆ ತಾಯಿಯೊಬ್ಬರು ಮನವಿ ಮಾಡಿದ್ದಾರೆ.
ಸಿದ್ದಿಪೇಟಿ ಜಿಲ್ಲೆಯ ಇರ್ಕೋಡು ಗ್ರಾಮದ 25 ವರ್ಷದ ತೆಲಂಗಾಣ ಯುವಕ ಗೋಲ್ಕೊಂಡ ರಾಜವರ್ಧನ ರೆಡ್ಡಿ ಸೌದಿಯಲ್ಲಿ ಸಿಲುಕಿಕೊಂಡ ವ್ಯಕ್ತಿ. ಭಾರತದಿಂದಲೇ ಸೌದಿಯಲ್ಲಿ ಕೆಲಸ ಹುಡುಕಾಟದಲ್ಲಿ ಇತನೇ ಅಬ್ದುಲ್ಲಾ ಬಿನ್ ಲುವೈಬಾನ್ ಅಲ್-ರಶೀದಿ ಎಂಬ ಶ್ರೀಮಂತ ವ್ಯಕ್ತಿಯ ಕಾರ್ ಡ್ರೈವಿಂಗ್ಗೆ ಚಾಲಕನಾಗಿ ಸೇರುವಂತೆ ಮೇಲ್ ಬಂದಿದೆ. ಇದರಿಂದ ರಾಜವರ್ಧನ ಇದೇ ಜು.2ರಂದು ಸೌದಿಗೆ ಪ್ರಯಾಣ ಬೆಳಸಿದ್ದಾನೆ.
ಈ ಕೆಲಸಕ್ಕಾಗಿ 2 ಲಕ್ಷ ರೂ. ಖರ್ಚು ಮಾಡಿದ ಇತನಿಗೆ ಸೌದಿಯ ಹೈಲ್ ಪ್ರಾಂತ್ಯದ ಧಾರ್ಘಟ್ ಎಂಬ ಪ್ರದೇಶದಲ್ಲಿ ತೀವ್ರ ಪರಿಸ್ಥಿತಿಯಲ್ಲಿ ಕೃಷಿ ಫಾರ್ಮ್ನಲ್ಲಿ ಕುರಿಗಳನ್ನು ಕಾಯುವ ಮತ್ತು ಜಮೀನ ಕೆಲಸ ಸಹಾಯಕನಾಗಿ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಹಿನ್ನೆಲೆ ನನ್ನ ಮಗನ ಪರಿಸ್ಥಿತಿ ಸೌದಿಯಲ್ಲಿ ತುಂಬಾ ಕೆಟ್ಟದ್ದಾಗಿದೆ. ಅಲ್ಲಿ ದೈಹಿಕ, ಮೌಖಿಕ ಮತ್ತು ಮಾನಸಿಕ ನಿಂದನೆಗೆ ಒಳಗಾಗಿದ್ದಾನೆ ಹೀಗಾಗಿ, ಕೂಡಲೇ ಅವನ್ನು ರಕ್ಷಿಸುವಂತೆ ತಾಯಿ ಲಕ್ಷ್ಮೀ ಮನವಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಹಿಂದೆ ಸೌದಿಯಲ್ಲಿ ತೆಲಂಗಾಣ ಯುವಕನೊಬ್ಬ ಉದ್ಯೋಗದಾಸೆಗೆ ಹೋಗಿ ಅಲ್ಲಿ ಒಂಟೆ ಕಾಯುತ್ತಿದ್ದ, ಬಳಿಕ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರಗೊಂಡಿತ್ತು. ಇದೇ ಆಕ್ಟೋಬರ್ನಲ್ಲಿ ಯುವಕನ್ನು ಭಾರತಕ್ಕೆ ಕರೆ ತರಲಾಗಿತ್ತು. ಈ ಇಂತದ್ದೇ ಮತ್ತೊಂದು ಘಟನೆ ಮರುಕಳುಸಿದೆ,(ಏಜೆನ್ಸೀಸ್).