

ಹೈದಾರಾಬಾದ್: 30 ವರ್ಷದ ಯೂಟ್ಯೂಬರ್ ಒಬ್ಬ 200 ರೂ. ನೋಟುಗಳ ಕಂತುಗಳನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದೀಗ ಈ ಯುವಕನನ್ನು ಬಂಧಿಸಲಾಗಿದೆ.
ಸಾರ್ವಜನಿರಿಗೆ ಉದ್ದೇಶಪೂರ್ವಕ ತೊಂದರೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಯೂಟ್ಯೂಬರ್, ಹೈದರಾಬಾದ್ ಬಾಲಾನಗರ ನಿವಾಸಿ ಭಾನಚಂದ್ರು ಅಲಿಯಾಸ್ ಆ್ಯಂಕರ್ ಚಂದ್ರು ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಈ ದಿನಾಂಕದಂದು ಜನಿಸಿದವರಿಗೆ 2025ರಲ್ಲಿ ರಾಜಯೋಗ! ನೀವು ಹುಟ್ಟಿದ್ದು ಇದೇ ದಿನಾನಾ? Numerology ವಿಡಿಯೋದಲ್ಲಿ ಏನಿದೆ? ಸಿಟಿ ಹೊರ ವಲಯದ ರಿಂಗ್ ರೋಡ್ನಲ್ಲಿ 200 ರೂ.ನೋಟುಗಳ ಬಂಡಲ್ಗಳನ್ನು ಎಸೆಯುತ್ತಿರುವ ವಿಡಿಯೋ ಮಾಡಿದ್ದಾನೆ. ಯಾರಾದರೂ ಬಂದು ನೋಟುಗಳು ತಗೆದುಕೊಳ್ಳಬಹುದು ಎಂದು ಹೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಈ ವಿಡಿಯೋ ಕ್ಷಣ ಮಾತ್ರದಲ್ಲಿ ಲಕ್ಷಾಂತರ ವಿಕ್ಷಣೆ ಪಡೆದಿದೆ. ಈ ಹಿನ್ನೆಲೆ ಸಾರ್ವಜನಿರು ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸ್ಥಳಕ್ಕೆ ಬಂದು ಸೇರಿದ್ದಾರೆ. ಅಲ್ಲಿ ಯಾವುದೇ ನೋಟಿನ ಕಂತುಗಳಾಗಲಿ ಅಥವಾ ದುಡ್ಡು ಇಲ್ಲ ಎಂದು ಜನರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ವಿಡಿಯೋ ಕಾರಣದಿಂದಾಗಿ ಸ್ಥಳಕ್ಕೆ ಸಾವಿರಾರು ಜನರು ಆಗಮಿಸಿದ ಕಾರಣ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಸರಿಪಡಿಸಲು ಸಂಚಾರ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಲ್ಲಿನ ಜನರಿಗೆ ಮಾತ್ರವಲ್ಲ ವಾಹನ ಸಂಚಾರ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇತ್ತೀಚಿಗೆ ಯುಟ್ಯೂಬರ್ ಒಬ್ಬ ಗಾಳಿಯಲ್ಲಿ ಹಣ ತೂರಿದ ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಇಂತದ್ದೊಂದು ಘಟನೆ ಮರುಕಳಿಸಿದೆ,(ಏಜೆನ್ಸೀಸ್).